ಡಿಎಸಿಎ ರದ್ದುಗೊಳಿಸಿದ ಟ್ರಂಪ್ ಆಡಳಿತದ ವಿರುದ್ಧ 15 ರಾಜ್ಯಗಳು ದಾವೆ, ತೀವ್ರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ನ್ಯೂಯಾರ್ಕ್, ಸೆ.7-ಅಮೆರಿಕಕ್ಕೆ ಚಿಕ್ಕ ವಯಸ್ಸಿನಲ್ಲೇ ವಲಸೆ ಬಂದು ನೋಂದಣಿಯಾಗದಿರುವ ವಲಸಿಗರನ್ನು ಗಡಿಪಾರಿನಿಂದ ರಕ್ಷಿಸುವ (ಡೆಫರ್ಡ್ ಆಕ್ಷನ್ ಫಾರ್ ಚೈಲ್ಡ್‍ಹುಡ್ ಅರೈವಲ್ಸ್ ಅಥವಾ ಡಿಎಸಿಎ) ಕಾನೂನು ರದ್ದುಗೊಳಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿರ್ಧಾರ ಈಗ ಭಾರೀ ವಿವಾದಕ್ಕೆ ಗುರಿಯಾಗಿದೆ. ಈ ಯೋಜನೆ ವಿರುದ್ಧ ತಿರುಗಿಬಿದ್ದಿರುವ 15 ರಾಜ್ಯಗಳು ಮತ್ತು ಕೊಲಂಬಿಯಾ ಸರ್ಕಾರದ ವಿರುದ್ಧ ದಾವೆ ಹೂಡಿವೆ. ಈ ಯೋಜನೆಯಿಂದ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಟ್ರಂಪ್ ಆಡಳಿತ ಮೊಸಳೆ ಕಣ್ಣೀರು ಸುರಿಸುತ್ತಿದ್ದು, ತಾನು ವಲಸಿಗರ ಪರವಾಗಿ ಇರುವುದಾಗಿ ಹೇಳಿಕೊಂಡಿದ್ದು, ಅವರನ್ನು ರಕ್ಷಿಸುವ ಹೊಣೆಯನ್ನು ಸಂಸತ್ತಿನ ಕಾಂಗ್ರೆಸ್‍ಗೆ ವಹಿಸಿದೆ.

Trump 01

ಟ್ರಂಪ್ ಆಡಳಿತದ ವಿರುದ್ಧ ಈ ರಾಜ್ಯಗಳು ಬ್ರೂಕ್ಲಿನ್‍ನ ಫೆಡರಲ್ ಕೋರ್ಟ್‍ನಲ್ಲಿ ಕಾನೂನು ದಾವೆ ಹೂಡಿದ್ದು, ಈ ಕಾನೂನು ರದ್ದುಗೊಳಿಸಿದ ಅಧ್ಯಕ್ಷರ ಕ್ರಮವನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿವೆ.  ಈ ಕಾನೂನಿನ ಅನ್ವಯ ಐದು ವರ್ಷಗಳ ಅವಧಿಯಲ್ಲಿ ಸುಮಾರು 8 ಲಕ್ಷ ಮಂದಿ ಗಡಿಪಾರಿನಿಂದ ರಕ್ಷಣೆ ಪಡೆದಿದ್ದಾರೆ. ಇವರಲ್ಲಿ 8,000 ಭಾರತೀಯರಿದ್ದಾರೆ. ಆದರೆ ಟ್ರಂಪ್ ಆಡಳಿತದ ನಿರ್ಧಾರ ಕಾರ್ಯರೂಪಕ್ಕೆ ಬಂದಲ್ಲಿ ಇವರೆಲ್ಲೂ ಗಡಿಪಾರಾಗಲಿದ್ದ, ಅವರ ಬದುಕು ಅತಂತ್ರವಾಗಲಿದೆ.

ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ 2012ರಲ್ಲಿ ವಲಸಿಗರಿಗೆ ರಕ್ಷಣೆ ನೀಡಿದ್ದ ಕಾನೂನನ್ನು ಟ್ರಂಪ್ ಮಂಗಳವಾರ ಹಿಂದಕ್ಕೆ ಪಡೆದಿದ್ದರು.
ತಮ್ಮ ನಿರ್ಧಾರದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಟ್ರಂಪ್, ವಲಸೆ ಬಂದಿರುವ ಜನರ ಬಗ್ಗೆ ನನಗೆ ಪ್ರೀತಿ-ವಿಶ್ವಾಸವಿದೆ. ಅವರಿಗೆ ಅಗತ್ಯ ನೆರವು ನೀಡಲು ಕಾಂಗ್ರೆಸ್ ನೆರವು ಕೋರಿದ್ದೇನೆ  ಎಂದು ಟ್ರಂಪ್ ಹೇಳಿದ್ದಾರೆ.

Sen. Kamala Harris, D-Calif., accompanied by members of the House and Senate Democrats, speaks during a news conference on Capitol Hill in Washington, Wednesday, Sept. 6, 2017. House and Senate Democrats gather to call for Congressional Republicans to stand up to President Trump's decision to terminate the Deferred Action for Childhood Arrivals (DACA) initiative by bringing the DREAM Act for a vote on the House and Senate Floor. ( AP Photo/Jose Luis Magana)

ಭಾರತೀಯ ಸಂಸದ ತಿರುಗೇಟು :

ಟ್ರಂಪ್ ಕ್ರಮವನ್ನು ಬಲವಾಗಿ ವಿರೋಧಿಸಿರುವ ಭಾರತೀಯ ಮೂಲದ ಸಂಸದರು ಈ ನಿರ್ಧಾರದ ಪರಿಣಾಮ ಅತ್ಯಂತ ವಿನಾಶಕಾರಿಯಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ವಾಷಿಂಗ್ಟನ್‍ನಲ್ಲಿ ಮಾತನಾಡಿದ ಡೆಮೊಕ್ರಾಟ್ ಸೆನೆಟರ್ ಕಮಲಾ ಹ್ಯಾರಿಸ್, ಅಮೆರಿಕ ಅಧ್ಯಕ್ಷರ ಕ್ರಮವು ಕ್ರೂರ ಮತ್ತು ಅಮಾನವೀಯ ಎಂದು ಛೇಡಿಸಿದರು.

Trump 05

Facebook Comments

Sri Raghav

Admin