ಪಂಜಾಬ್ ಸೇನಾ ಶಸ್ತ್ರಾಸ್ತ್ರ ಕೋಠಿಗೆ ಬೆಂಕಿ ಬಿದ್ದು ಅಪಾರ ನಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

Punjab--01

ಚಂಡೀಗಢ, ಸೆ.7- ಪಂಜಾಬ್ ನ ಬಟಿಂಡಾ ಜಿಲ್ಲೆಯ ಸೇನಾ ಶಸ್ತ್ರಾಸ್ತ್ರ ಕೋಠಿಯಲ್ಲಿ (ಅಮ್ಯುನೀಷನ್ ಡಿಪೋ) ಇಂದು ಮುಂಜಾನೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಅಪಾರ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಶಾರ್ಟ್ ಸಕ್ರ್ಯೂಟ್‍ನಿಂದ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೆಳಗ್ಗೆ 5.10ರಲ್ಲಿ ಸೇನಾ ಶಸ್ತ್ರಾಸ್ತ್ರ ಕೋಠಿಯಲ್ಲಿ ಬೆಂಕಿ ಕಾಣಿಸಿಕೊಂಡು 6.30ರವರೆಗೆ ಧಗಧಗಿಸಿತು. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಬಟಿಂಡಾ ಜಿಲ್ಲಾಧಿಕಾರಿ ದೀಪ್ರವ ಲಕ್ರಾ ಹೇಳಿದ್ದಾರೆ. ಬೆಂಕಿ ಆಕಸ್ಮಿಕದಲ್ಲಿ ಭಾರೀ ನಷ್ಟವಾಗಿದ್ದು, ಇದನ್ನು ಸೇನೆ ಅಂದಾಜು ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಹಲ್ದಿರಾಮ್ ಘಟಕ ಧಗಧಗ :

ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್-68ರಲ್ಲಿ ಪ್ರಖ್ಯಾತ ಆಹಾರ ತಯಾರಿಕೆ ಸಂಸ್ಥೆ ಹಲ್ದಿರಾಮ್ ಕೈಗಾರಿಕಾ ಘಟಕದಲ್ಲಿ ನಿನ್ನೆ ರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿ ನಷ್ಟ ಸಂಭವಿಸಿದೆ.  ಆಹಾರ ಸಾಮಗ್ರಿಗಳು, ಯಂತ್ರೋಪಕರಣಗಳು ಬೆಂಕಿಗಾಹುತಿಯಾಗಿವೆ. ಕಾರ್ಖಾನೆಯಲ್ಲಿದ್ದ ನೌಕರರು ಅಪಾಯದಿಂದ ಪಾರಾಗಿದ್ದಾರೆ. ಆರು ವಾಹನಗಳೊಂದಿಗೆ ಸಿಬ್ಬಂದಿ ಅಗ್ನಿಯ ಕೆನ್ನಾಲಗೆಯನ್ನು ನಂದಿಸಿದರು. ಹಲ್ದಿರಾಮ್ ಉತ್ಪನ್ನಗಳ ಬಹುಪಾಲು ಸಿಹಿ ತಿನಿಸುಗಳು ಮತ್ತು ಖಾರಾ ಆಹಾರ ಪದಾರ್ಥಗಳು ಈ ಘಟಕದಲ್ಲೇ ತಯಾರಾಗುತ್ತವೆ.

Facebook Comments

Sri Raghav

Admin