ಮ್ಯಾನ್ಮಾರ್’ನ ಪ್ರಾಚೀನ ಪಗೋಡಾಗೆ ಪ್ರಧಾನಿ ಮೋದಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಯಾನ್‍ಗೊನ್, ಸೆ.7-ಮ್ಯಾನ್ಮಾರ್ ರಾಷ್ಟ್ರದ ಭವ್ಯ ಸಂಸ್ಕøತಿ-ಪರಂಪರೆಯ ಪರಾಕಾಷ್ಠೆ ಎಂದೇ ಪರಿಗಣಿಸಲಾದ 2,500 ವರ್ಷಗಳಷ್ಟು ಪುರಾತನವಾದ ಶ್ವೆಡಾಗೊನ್ ಪಗೋಡಾಗೆ(ಗುಡಿ-ಗೋಪುರ) ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. ಬೌದ್ಧ ಧರ್ಮೀಯರ ಪ್ರಾಬಲ್ಯವಿರುವ ಮ್ಯಾನ್ಮಾರ್‍ಗೆ ಮೂರು ದಿನಗಳ ಪ್ರವಾಸದ ಅಂತಿಮ ದಿನವಾದ ಇಂದು ಪಗೋಡಾದಲ್ಲಿ ಮೋದಿ ವಿಶೇಷ ಗೌರವ ಸಮರ್ಪಿಸಿ ಸಂಸ್ಕøತಿ ಪರಂಪರೆಯ ಸಂಕೇತವಾಗಿ ಬೋಧಿ ವೃಕ್ಷದ ಗಿಡವೊಂದನ್ನು ನೆಟ್ಟರು.

Modi  07

ಮ್ಯಾನ್ಮಾರ್‍ನ ಪರಂಪರೆಯ ಹೆಗ್ಗುರುತಾದ ಶ್ವೆಡಾಗೊನ್ ಪಗೋಡಾಗೆ ಭೇಟಿ ನೀಡಿ ಪುಳಕಿತನಾದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.  ಮೋದಿ ಅವರು ವಿಶ್ವವಿಖ್ಯಾತವಾದ ಈ ಪ್ರಾಚೀನ ಸ್ಮಾರಕಕ್ಕೆ ಭೇಟಿ ನೀಡಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ. ನಂತರ ಪ್ರಧಾನಿಯವರು ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು ಹಾಗೂ ಯಾನ್‍ಗೊನ್‍ನ ಕಾಳಿಬರಿ ದೇವಸ್ಥಾನಕ್ಕೂ ಭೇಟಿ ನೀಡಿ ಧಾರ್ಮಿಕ ಕೈಂಕರ್ಯ ನೆರವೇರಿಸಿದರು. ಪ್ರೇಕ್ಷಣೀಯ ಸ್ಥಳಗಳ ಭೇಟಿ ನಂತರ ಪ್ರಧಾನಿ ತಾಯ್ನಾಡಿನತ್ತ ಪ್ರಯಾಣ ಬೆಳೆಸಿದರು.

Modi  10

Modi  08

Modi  03

Modi  06

 

Facebook Comments

Sri Raghav

Admin