ಲಷ್ಕರ್, ಜೈಷ್ ಉಗ್ರರು ನಮ್ಮ ನೆಲದಲ್ಲಿದ್ದಾರೆ, ಅದರಲ್ಲೇನು ಅಚ್ಚರಿ..!? : ಪಾಪಿ ಪಾಕ್

ಈ ಸುದ್ದಿಯನ್ನು ಶೇರ್ ಮಾಡಿ

Pakistan-Terrorism

ನವದೆಹಲಿ/ಇಸ್ಲಾಮಾಬಾದ್, ಸೆ.7-ನಿಷೇದಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೈಬಾ (ಎಲ್‍ಇಟಿ) ಮತ್ತು ಜೈಷ್-ಎ-ಮೊಹಮದ್ ತನ್ನ ನೆಲದಲ್ಲೇ ಇದ್ದಾರೆ ಹಾಗೂ ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.  ಭಯೋತ್ಪಾದಕರ ಸ್ವರ್ಗ ಎಂದೇ ಕುಖ್ಯಾತಿಗೆ ಗುರಿಯಾಗಿರುವ ಪಾಕಿಸ್ತಾನ ವಿಶ್ವದ ಎಲ್ಲ ದೇಶಗಳ ಕೆಂಗಣ್ಣಿಗೆ ಗುರಿಯಾದ ಸಂದರ್ಭದಲ್ಲೇ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಲಷ್ಕರ್ ಮತ್ತು ಜೈಷ್ ಉಗ್ರರು ಇಲ್ಲೇ ಇದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

ಜಿಯೋ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲೇ ಇದ್ದಾರೆ. ಇದರಲ್ಲಿ ಅಚ್ಚರಿ ಏನು? ಎಂದು ಪ್ರಶ್ನಿಸಿದ್ದಾರೆ.  ಇಡೀ ವಿಶ್ವವೇ ನಮ್ಮ ಕಡೆ ಬೊಟ್ಟು ಮಾಡುತ್ತಿದೆ. ನಾವು ಕಳೆದ ಮೂರು ವರ್ಷಗಳಿಂದ ಭಯೋತ್ಪಾದಕರನ್ನು ಮಟ್ಟ ಹಾಕಲು ಶ್ರಮಿಸುತ್ತಲೇ ಇದ್ದೇವೆ. ಅದು ಈಗಲೂ ಮುಂದುವರಿದಿದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ

Facebook Comments

Sri Raghav

Admin