ವಿಚಾರವಾದಿಗಳಿಂದಲೇ ಗೌರಿ ಹತ್ಯೆಯಾಗಿರಬಹುದು : ಕವಿತಾ ಲಂಕೇಶ್

ಈ ಸುದ್ದಿಯನ್ನು ಶೇರ್ ಮಾಡಿ

Kavita-Lnkesh--01

ಬೆಂಗಳೂರು, ಸೆ.7- ನನ್ನ ಅಕ್ಕ ಗೌರಿ ಲಂಕೇಶ್ ವಿಚಾರವಾದದಿಂದಲೇ ಹತ್ಯೆಯಾಗಿರಬಹುದು ಎಂದು ಕವಿತಾ ಲಂಕೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ನನ್ನ ಅಕ್ಕನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಸಂದೇಶಗಳು ಬರುತ್ತಿದ್ದವು. ನಕ್ಸಲರು ಅಥವಾ ಬಲಪಂಥೀಯರು ಹತ್ಯೆ ಮಾಡಿರಬಹುದು ಎಂಬ ಅನುಮಾನವಿದೆ ಎಂದು ತಮ್ಮ ಮನೆಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನನ್ನ ಅಕ್ಕ ಹೇಡಿಯಾಗಿರಲಿಲ್ಲ. ಎಲ್ಲ ವಿಷಯಗಳನ್ನೂ ಮುಕ್ತವಾಗಿ ಬರೆಯುತ್ತಿದ್ದಳು. ಅದನ್ನು ಸಹಿಸದೆ ಅಕ್ಕನನ್ನು ಹತ್ಯೆ ಮಾಡಿದ್ದಾರೆ ಎಂದರು. ಈ ರೀತಿಯ ಕೃತ್ಯಗಳು ಎಲ್ಲೂ ನಡೆಯಬಾರದು. ಪತ್ರಕರ್ತರಿಗೆ ಜೀವ ಬೆದರಿಕೆ ಬರಬಾರದು ಎಂದ ಅವರು, ಡಾ.ಎಂ.ಎಂ.ಕಲಬುರ್ಗಿ ಪ್ರಕರಣದ ನ್ಯಾಯಕ್ಕಾಗಿ ಅವರ ಕುಟುಂಬದವರು ಕಾಯುತ್ತಿದ್ದಾರೆ. ನಮ್ಮ ಅಕ್ಕನ ಪ್ರಕರಣ ಅದೇ ರೀತಿ ಆಗಬಾರದು. ಆದಷ್ಟು ಬೇಗ ನ್ಯಾಯ ಸಿಗಬೇಕು. ಎಸ್‍ಐಟಿ ಅಥವಾ ಸಿಬಿಐ ತನಿಖೆಯಾಗಲಿ ಒಟ್ಟಿನಲ್ಲಿ ನನ್ನ ಅಕ್ಕನ ಸಾವಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಗೌರಿ ಲಂಕೇಶ್ ಅವರ ಮನೆಗೆ ಐದು ತಿಂಗಳು ಮೊದಲೇ ಸಿಸಿಟಿವಿ ಅಳವಡಿಸಲಾಗಿತ್ತು. ಸಿಸಿಟಿವಿಯಲ್ಲಿ ದೊರೆತಿರುವ ಸಾಕ್ಷ್ಯಗಳನ್ನು ನಮ್ಮ ಸಮ್ಮುಖದಲ್ಲೇ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

Facebook Comments

Sri Raghav

Admin