ಹೇಮಾವತಿ ಜಲಾಶಯಕ್ಕೆ ಗೌಡರ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Devegowda-a

ಹಾಸನ, ಸೆ.7- ಇಲ್ಲಿನ ಹೇಮಾವತಿ ಜಲಾಶಯಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದ್ದು , ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿರುವುದರಿಂದ ನೀರಿನ ಸಂಗ್ರಹ ಕುರಿತು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಂದು ಬೆಳಗ್ಗೆ ಡ್ಯಾಂಗೆ ತೆರಳಿ ಸುಮಾರು ಅರ್ಧ ಗಂಟೆ ವೀಕ್ಷಣೆ ಮಾಡಿ ನೀರಿನ ಮಟ್ಟ ಎಷ್ಟಿದೆ, ಎಷ್ಟು ನೀರು ಹೊರ ಹೋಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನೀರಿನ ಸಂಗ್ರಹ ನೋಡಿಕೊಂಡು ಜಿಲ್ಲೆಯ ಕೆರೆ ಹಾಗೂ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದ್ದಾರೆ.

Facebook Comments

Sri Raghav

Admin