ಅಮೆರಿಕ ದಾಳಿ ನಡೆಸಿದರೆ ಅದು ಕೊರಿಯಾಗೆ ಅತ್ಯಂತ ಕೆಟ್ಟ ದಿನವಾಗಲಿದೆ : ಟ್ರಂಪ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Trump-North-korea

ವಾಷಿಂಗ್ಟನ್, ಸೆ.8-ಯುದ್ಧೋನ್ಮಾದದಲ್ಲಿರುವ ಉತ್ತರ ಕೊರಿಯಾ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವುದು ತಮಗೆ ಖಂಡಿತವಾಗಿಯೂ ಒಂದು ಆಯ್ಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.  ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಪರೀಕ್ಷಿಸುತ್ತಾ ಆತಂಕ ಸೃಷ್ಟಿಸುತ್ತಿರುವ ಉತ್ತರ ಕೊರಿಯಾಗೆ ಮಿಲಿಟರಿ ಕ್ರಮ ಕೈಗೊಳ್ಳಲು ತಾವು ಬಯಸುವುದಿಲ್ಲವಾದರೂ, ಒಂದು ವೇಳೆ ತಾವು ಇದಕ್ಕೆ ಮುಂದಾದರೆ ಪಯೊಂಗ್‍ಯಾಂಗ್ ನಾಯಕರಿಗೆ ಇದು ಅತ್ಯಂತ ಕೆಟ್ಟ ದಿನವಾಗುತ್ತದೆ ಎಂದೂ ಟ್ರಂಪ್ ಎಚ್ಚರಿಕೆ ನೀಡಿದ್ಧಾರೆ.

ಕುವೈತ್ ದೊರೆ ಎಮಿರ್ ಸಾಬ್ಹಾ ಅಲ್-ಅಹಮದ್ ಅಲ್-ಜಬೆರ್ ಅಲ್-ಸಾಬ್ಹಾ ಅವರೊಂದಿಗೆ ನಿನ್ನೆ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷರು, ಸೇನಾ ಕ್ರಮ ಖಂಡಿತಾ ನನ್ನ ಆಯ್ಕೆ. ಇದು ಅನಿವಾರ್ಯವಲ್ಲವೇ? ಎಂದು ಪ್ರಶ್ನಿಸಿದರು.  ಉತ್ತರ ಕೊರಿಯಾ ವಿರುದ್ಧ ವಿನಾಕಾರಣ ಸೇನಾ ಕಾರ್ಯಾಚರಣೆ ನಡೆಸಲು ನಾವು ಬಯಸುವುದಿಲ್ಲ. ಒಂದು ವೇಳೆ ಈ ಬಗ್ಗೆ ನಿರ್ಧಾರ ಕೈಗೊಂಡರೆ ಪರಿಸ್ಥಿತಿ ಗಂಭೀರವಾಗಿರುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದರು.

Facebook Comments

Sri Raghav

Admin