ಗೌರಿ ಹತ್ಯೆ ಕುರಿತು ಬೆಂಗಳೂರಲ್ಲಿ ಆಂಧ್ರ ಪೊಲೀಸರಿಂದ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ಬೆಂಗಳೂರು, ಸೆ.8-ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲ್ ಕೈವಾಡವಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿರುವ ಆಂಧ್ರ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು ಇಂದೂ ಕೂಡ ತನಿಖೆ ಮುಂದುವರೆಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯಾದ ನಂತರ ನಕ್ಸಲ್ ಕೈವಾಡವಿರುವ ಬಗ್ಗೆ ನಗರ ಪೊಲೀಸರು ಆಂಧ್ರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ನಗರಕ್ಕೆ ಆಗಮಿಸಿದ್ದ ಆಂಧ್ರ ಪೊಲೀಸರು ಗೌರಿ ಲಂಕೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸಿಸಿ ಟಿವಿ ದೃಶ್ಯಾವಳಿಗಳು ಮತ್ತು ಹಂತಕರು ಹಾರಿಸಿದ ಗುಂಡಿನ ಕಾಟ್ರೇಜ್‍ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಗೌರಿ ಹತ್ಯಾ ಪ್ರಕರಣ ಭೇದಿಸಲು ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದ ಅಧಿಕಾರಿಗಳೊಂದಿಗೂ ಆಂಧ್ರ ಪೊಲೀಸರು ಚರ್ಚೆ ನಡೆಸಿದ್ದು, ಇಂದೂ ಕೂಡ ನಗರದಲ್ಲಿ ಬೀಡು ಬಿಟ್ಟಿದ್ದು, ವಿವಿಧ ಕೋನಗಳಿಂದ ತನಿಖೆ ಮುಂದುವರೆಸುತ್ತಿದೆ.

Facebook Comments

Sri Raghav

Admin