ಛತ್ತೀಸ್‍ಗಢದಲ್ಲಿ ಬಸ್‍ಗೆ ಬೆಂಕಿ ಇಟ್ಟ ನಕ್ಸಲರು : ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Bus-Fire--01

ರಾಯ್‍ಪುರ್, ಸೆ.8-ನಕ್ಸಲರ ಗುಂಪೊಂದು ಬಸ್ ಒಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಛತ್ತೀಸ್‍ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ.  ಜಗದಾಳ್ ಜಿಲ್ಲಾ ಕೇಂದ್ರದಿಂದ ಬರೇಗುಡಾಗೆ ನಿನ್ನೆ ಸಂಜೆ ತೆರಳುತ್ತಿದ್ದ ಖಾಸಗಿ ಬಸ್‍ನನ್ನು ಆರು ಶಸ್ತ್ರಸಜ್ಜಿತ ನಕ್ಸಲರು ಅಡ್ಡಗಟ್ಟಿ, ಪ್ರಯಾಣಿಕರನ್ನು ಬಸ್‍ನಿಂದ ಇಳಿಯುವಂತೆ ಬೆದರಿಕೆ ಹಾಕಿದರು. ನಂತರ ಖಾಲಿ ಬಸ್‍ಗೆ ಬೆಂಕಿ ಹಚ್ಚಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.  ದುಷ್ಕøತ್ಯ ಎಸಗಿದ ನಕ್ಸಲರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Facebook Comments

Sri Raghav

Admin