ಬೆಂಗಳೂರಲ್ಲಿ ಭಾರಿ ಮಳೆ : ಕಾರ್ ಮೇಲೆ ಮರ ಬಿದ್ದು ಮೂವರ ಸಾವು, ನೀರಿನಲ್ಲಿ ಕೊಚ್ಚಿಹೋದ ಯುವಕ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಬೆಂಗಳೂರು, ಸೆ. 8: ಇಂದು ಸಂಜೆ ಮತ್ತೆ ಬೆಂಗಳೂರಲ್ಲಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆ ಭಾರಿ ಅನಾವುಟಗಳನ್ನೇ ಸೃಷ್ಟಿಸಿದೆ. ಮಿನರ್ವ ಸರ್ಕಲ್ ಬಳಿ ಎಸ್ಟೀಮ್ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದು ಮಹಿಳೆ ಸೇರಿ ಮೂರು ಜನರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್ ಬಳಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದೆ.

ಜಯನಗರ, ಹನುಮಂತನಗರ, ಬಸವನಗುಡಿ, ವಿಲ್ಸನ್ ಗಾರ್ಡನ್, ಆಡುಗೋಡಿ, ಕೋರಮಂಗಲ, ಮಡಿವಾಳ, ಮಾರುತಿ ವೃತ್ತ, ವರ್ತೂರು ಕೆರೆ, ಟೌನ್ ಹಾಲ್ ಸೇರಿದಂತೆ ನಗದ ಬಹುತೇಕ ಕಡೆ 1 ಗಂಟೆ ಕಾಲ ನಿರಂತರವಾಗಿ ಮಳೆ ಸುರಿದಿದೆ. ಹಲವೆಡೆ ಮರಗಳು ರಸ್ತೆಗುರುಳಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಟ್ರಾಫಿಕ್ ನಲ್ಲಿ ಸಿಲುಕಿ ಪರಿಪಾಟಲು ಪಡುವಂತಾಗಿದೆ. ಹನುಮಂತನಗರದಲ್ಲಿ ಮಳೆಯಿಂದಾಗಿ ಕರೆಂಟ್ ಕಂಬವೊಂದು ಧರೆಗುರುಳಿದೆ. ಕೆಲವು ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.

ಮೇಯರ್ ದೌಡು :
ವಿಪರೀತವಾಗಿ ಮಳೆ ಸುರಿದ ಕೆಲವು ಪ್ರದೇಶಗಳಿಗೆ ಮೇಯರ್ ಪದ್ಮಾವತಿ ದೌಡಾಯಿಸಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಸಾರ್ವಜನಿಕರು ಮೇಯರ್ ನ್ನು ತರಾಟೆಗೆ ತೆಗೆದುಕೊಂಡರು .

Facebook Comments

Sri Raghav

Admin