ಬ್ರೇಟ್ ಲೀ ಕುಸ್ತಿಗೂ ಸೈ, ಕ್ರಿಕೆಟ್‍ಗೂ ಜೈ

ಈ ಸುದ್ದಿಯನ್ನು ಶೇರ್ ಮಾಡಿ

Brett-Lee

ಮೈಸೂರು,ಸೆ.8-ಕ್ರಿಕೆಟಿಗೂ ಸೈ, ಕುಸ್ತಿಗೂ ಜೈ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬ್ರೇಟ್ ಲೀ ಅವರು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಕುಸ್ತಿ ಪಂದ್ಯವಾಡಿ ಗಮನ ಸೆಳೆದಿದ್ದಾರೆ.  ಮಾನಸ ಗಂಗೋತ್ರಿ ಗ್ಲೈಡ್ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಕೆಪಿಎಲ್ ಪಂದ್ಯಾವಳಿಯ ವೀಕ್ಷಣೆ ವಿವರಣೆಗಾರರಾಗಿರುವ ಬ್ರೇಟ್ ಲೀ , ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಎದುರಾಳಿಗಳನ್ನು ಸೋಲಿಸಿ ಸಂಭ್ರಮಿಸಿದ್ದಾರೆ.

ಚಂದ್ರಶೇಖರ್ ಟಮೊಟೊ, ಅಮೃತ್, ಬಾಲಾಜಿ, ಚೋಟ ರಸಿಕ್ ಕುಸ್ತಿ ಪೈಲ್ವಾರನ್ನು ಮೈದಾನದಲ್ಲಿ ಸೋಲಿಸಿ ಬ್ರೇಟ್ ಲೀ ತಾನು ಕುಸ್ತಿಗೂ ಸೈ ಎಂದು ತಮ್ಮ ಭುಜಬಲ ಪ್ರದರ್ಶಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಬ್ರೇಟ್ ಲೀ ರಸದೌತಣ ನೀಡಿದ್ದಾರೆ. ಕುಸ್ತಿಯ ಸಂಪ್ರದಾಯದಂತೆ ಉಡುಪು ಧರಿಸಿ ಅಖಾಡಕ್ಕೆ ನಮಸ್ಕರಿಸಿ ಎದುರಾಳಿಯ ಪೈಲ್ವಾನಗಳನ್ನು ಕೆಡವಿ ಹಾಕಿದ್ದಾರೆ. ಈ ವೇಳೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಸಂಭ್ರಮಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬ್ರೇಟ್ ಲೀ ಮೈಸೂರು ಮಹಾರಾಣಿ ಪ್ರಮೋದಾದೇವಿ ಅವರನ್ನು ಭೇಟಿ ಮಾಡಿದರು.

Facebook Comments

Sri Raghav

Admin