ಮನೆ ಮೇಲ್ಛಾವಣಿ ಕುಸಿದು ದಂಪತಿ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bijapur--01

ವಿಜಯಪುರ,ಸೆ.8-ತೋಟದ ಮನೆ ಮೇಲ್ಛಾವಣಿ ಕುಸಿದು ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲ್ಲೂಕಿನ ಜೇವೂರ ಗ್ರಾಮದಲ್ಲಿ ನಡೆದಿದೆ. ಕರಿಬಸಪ್ಪ ಅಕಳವಾಡಿ(75) ಹಾಗೂ ಆತನ ಪತ್ನಿ ಇಂದಿರಾ ಬಾಯಿ ಅಕಳವಾಡಿ(65) ಮೃತ ದಂಪತಿ. ಬಾರಿ ಮಳೆಯಿಂದಾಗಿ ಮೇಲ್ಛಾವಣಿ ನೆನೆದು ಮನೆಯೆಲ್ಲ ಸೋರುತ್ತಿತ್ತು. ನಿನ್ನೆ ರಾತ್ರಿ ದಂಪತಿ ಮಲಗಿದ್ದಾಗ ಅವರ ಮೇಲೆ ಛಾವಣಿ ಕುಸಿದುಬಿದ್ದು ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ.  ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2017-09-08 at 9.26.55 AM

WhatsApp Image 2017-09-08 at 9.27.00 AM

WhatsApp Image 2017-09-08 at 10.13.43 AM

Facebook Comments

Sri Raghav

Admin