ಸಿನಿಮೀಯ ರೀತಿ ಕಾರಿನಲ್ಲಿ ಬಂದು ರೌಡಿ ಶೀಟರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Murder--0121

ಬೆಂಗಳೂರು, ಸೆ.8- ಸಿನಿಮೀಯ ರೀತಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ರೌಡಿ ಶೀಟರ್ ಮೇಲೆ ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರಗಳಿಂದ ತಲೆ ಹಾಗೂ ಇನ್ನಿತರೆಡೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಡಿಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೋಟನ್ ಅಲಿಯಾಸ್ ನಾಸಿರ್ ಆಲಿ (34) ಹಲ್ಲೆಗೊಳಗಾದ ರೌಡಿ ಶೀಟರ್. ತಡರಾತ್ರಿ ನಗರದ ಶಾಂಪುರ ಮುಖ್ಯರಸ್ತೆ ಬಳಿ ರೌಡಿ ಶೀಟರ್ ಚೋಟನ್ ಇರುವುದನ್ನು ಖಚಿತಪಡಿಸಿಕೊಂಡ 8 ಮಂದಿಯ ದುಷ್ಕರ್ಮಿಗಳ ತಂಡ ಕಾರಿನಲ್ಲಿ ಬಂದಿದೆ. ಮಾರಕಾಸ್ತ್ರಗಳಿಂದ ಏಕಾಏಕಿ ಚೋಟನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾರಿನಲ್ಲಿ ಈ ತಂಡ ಪರಾರಿಯಾಗಿದೆ.

ಗಂಭೀರ ಗಾಯಗೊಂಡು ತೀವ್ರ ರಕ್ತದ ಮಡುವಿನಲ್ಲಿದ್ದ ಚೋಟನ್‍ನನ್ನು ದಾರಿಹೋಕರು ತಕ್ಷಣ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದ ಡಿಜಿ ಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin