ಹೆಂಡತಿ ಜೊತೆ ಗಂಡ ಮಾತನಾಡದಿರುವುದು ಕ್ರೌರ್ಯ ಆಗಲ್ಲ : ಸುಪ್ರೀಂ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Wife--01

ನವದೆಹಲಿ,ಸೆ.8- ಹೆಂಡತಿ ಜತೆ ಮಾತನಾಡದಿರುವುದು ಕ್ರೌರ್ಯ ಆಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದಾವೆ ಹೂಡಿದ್ದರು. ಎಲ್ಲ ಪ್ರಯತ್ನಗಳ ನಂತರ ಕೂಡ ನನ್ನ ಗಂಡ ಇಪ್ಪತ್ತು ದಿನ ಮಾತನಾಡಿಲ್ಲ ಎಂಬುದು ಆಕೆಯ ದೂರಾಗಿತ್ತು.ಮದುವೆಯ ನಂತರ ಇಪ್ಪತ್ತು ದಿನಗಳ  ಕಾಲ ಪತಿಯ ಜತೆಗೆ ವಾಸವಿದ್ದೆ. ನನ್ನನ್ನು ಒಂಟಿಯಾಗಿ ಮಾಡಿದರು. ಯಾರೂ ನನ್ನ ಜತೆಗೆ ಮಾತನಾಡುತ್ತಿರಲಿಲ್ಲ. ನನ್ನ ಪತಿ ಬೇಕೆಂತಲೇ ದೂರ ಮಾಡಿದರು ಎಂದು ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳೆಯು ದೂರನ್ನು ನೀಡಿದ್ದರು.

ಆ ಮಹಿಳೆಯ ಪತಿ ಹಾಗೂ ಅತನ ಪೋಷಕರು ಹೈದರಾಬಾದ್‍ನ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಹೈ ಕೋರ್ಟ್ ತಿರಸ್ಕರಿಸಿತ್ತು. ಆ ನಂತರ ಕುಟುಂಬವು ಸುಪ್ರೀಂ ಕೋರ್ಟ ತಲುಪಿತ್ತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಮೋಹನ್ ಶಾಂತನ ಗೌಡರ್ ಅವರನ್ನು ಒಳಗೊಂಡ ಪೀಠವು, ಆ ಮಹಿಳೆಯು ನೀಡಿದ ದೂರು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ತೀರ್ಪು ಮಹತ್ವದ್ದಾಗಿದೆ. ಮಹಿಳೆಯು ದೂರು ನೀಡಿದ ಸೆಕ್ಷನ್ ಈ ಪ್ರಕರಣಕ್ಕೆ ಲಾಗೂ ಆಗುವುದಿಲ್ಲ ಎಂಬುದನ್ನು ಹೇಳಲಾಗಿದೆ.

Facebook Comments

Sri Raghav

Admin