ಆರ್‍ಎಸ್‍ಎಸ್-ಸಿಪಿಎಂ ಕಾರ್ಯಕರ್ತರ ನಡುವೆ ಹಿಂಸಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

CPM--01

ಕಣ್ಣೂರು(ಕೇರಳ), ಸೆ.9-ಕೇರಳದಲ್ಲಿ ಆರ್‍ಎಸ್‍ಎಸ್ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಹಿಂಸಾಚಾರ ಮುಂದುವರಿದೆ. ಎರಡು ಪ್ರತೇಕ ದಾಳಿ ಪ್ರಕರಣಗಳಲ್ಲಿ ಆರ್‍ಎಸ್‍ಎಸ್ ಮತ್ತು ಡಿವೈಎಫ್‍ಐ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.  ತೋಕಿಲಗಡಿ ಪರಪರಿಂಬಿಲ್‍ನಲ್ಲಿ ನಿನ್ನೆ ರಾತ್ರಿ ಆರ್‍ಎಸ್‍ಎಸ್ ಕಾರ್ಯಕರ್ತರು ಎಸೆದ ಬಾಂಬ್‍ನಿಂದ ಸಿಪಿಐ(ಎಂ) ವಿದ್ಯಾರ್ಥಿ ಘಟಕ ಡಿವೈಎಫ್‍ಐನ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಾಳುಗಳನ್ನು ತಲಸ್ಸೆರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಚಿತ್ತರಿಪರಂಬು ಪ್ರದೇಶದಲ್ಲಿ ಸಿಪಿಐ-ಎಂ ಕಾರ್ಯಕರ್ತರು ಮಾರಕಾಸ್ತ್ರಗಳಿಗೆ ನಡೆಸಿದ ದಾಳಿಯಲ್ಲಿ ಆರ್‍ಎಸ್‍ಎಸ್ ಸ್ಥಳೀಯ ಮುಖಂಡ ತೀವ್ರ ಗಾಯಗೊಂಡಿದ್ದು, ತಲಸ್ಸೆರಿಯ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

Sri Raghav

Admin