ಇರ್ಮಾ ಚಂಡಮಾರುತ ಭೀತಿಯಿಂದ ಪ್ಲೊರಿಡಾದಲ್ಲಿ ಸಾಮೂಹಿಕ ವಲಸೆ

ಈ ಸುದ್ದಿಯನ್ನು ಶೇರ್ ಮಾಡಿ

Irma--01

ಮಿಯಾಮಿ, ಸೆ.9-ಕೆರೆಬಿಯನ್ ದ್ವೀಪದಲ್ಲಿ 20ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ವಿನಾಶಕಾರಿ ಇರ್ಮಾ ಚಂಡಮಾರುತ ಈಗ ಅತ್ಯಂತ ರಭಸವಾಗಿ ಅಮೆರಿಕದ ಪ್ಲೊರಿಡಾದತ್ತ ಮುನ್ನುಗ್ಗುತ್ತಿದೆ. ಭಾರೀ ಅನಾಹುತ ಭೀತಿಯಿಂದ ಸಹಸ್ರಾರು ಮಂದಿ ಸುರಕ್ಷಿತ ಪ್ರದೇಶಗಳತ್ತ ವಲಸೆ ಹೋಗುತ್ತಿದ್ದಾರೆ.
ಕೆರೆಬಿಯನ್ ದ್ವೀಪದಿಂದ ಗರಿಷ್ಠ ಸಾಮಥ್ರ್ಯ ಕೆಟಗರಿ-5 ವೇಗದಲ್ಲಿ ಕ್ಯೂಬಾದ ಕ್ಯಾಮಾಗ್ಯುಯೆ ಪ್ರದೇಶದ ಮೇಲೆ ಅಪ್ಪಳಿಸಿದ ಚಂಡಮಾರುತ ಅಲ್ಲಿ ಭಾರೀ ಮಳೆ ಸುರಿಸುತ್ತಿದ್ದು, ಸಾವು-ನೋವಿನ ಪ್ರಾಥಮಿಕ ವರದಿಯಾಗಿವೆ.

ಗಂಟೆಗೆ 260 ಕಿ.ಮೀ. ವೇಗದಲ್ಲಿ ಮುನ್ನುಗ್ಗುತ್ತಿರುವ ಪ್ರಚಂಡ ಮಾರುತ ಇಂದು ರಾತ್ರಿ ಪ್ಲೊರಿಡಾ ಅಪ್ಪಳಿಸಲಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಮನೆಗಳಿಗೆ ಮರಳು ಚೀಲಗಳ ಕೋಟೆ ನಿರ್ಮಿಸಿ ಸುರಕ್ಷಿತ ಸ್ಥಳಗಳತ್ತ ಪಲಾಯನವಾಗುತ್ತಿದ್ದಾರೆ.

Facebook Comments

Sri Raghav

Admin