ಕಾರ್ನಾಡ್, ಪಾಪು, ಬರಗೂರು, ಕಣವಿ ಸೇರಿದಂತೆ 17 ಸಾಹಿತಿಗಳಿಗೆ ಪೊಲೀಸ್ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Poets-Kannada--01

ಬೆಂಗಳೂರು, ಸೆ.9- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್‍ಕಾರ್ನಾಡ್, ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಪಾಟೀಲ್‍ಪುಟ್ಟಪ್ಪ, ಚೆನ್ನವೀರ ಕಣವಿ ಸೇರಿದಂತೆ 17ಮಂದಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಭದ್ರತೆಯನ್ನು ಮಂಜೂರು ಮಾಡಿದೆ.
ಇದೇ ರೀತಿ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಹೋರಾಟ ನಡೆಸುತ್ತಿರುವ ಸಚಿವರಾದ ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮ್‍ಧಾರ್, ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜಹೊರಟ್ಟಿ ಹಾಗೂ ಪ್ರೊ.ಭಗವಾನ್, ಕುಂ.ವೀರಭದ್ರಪ್ಪ, ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬಿ.ಟಿ.ಲಲಿತಾನಾಯಕ್ ಅವರಿಗೂ ಭದ್ರತೆ ನೀಡಲಾಗಿದೆ.

ನಾಲ್ಕು ದಿನಗಳ ಹಿಂದೆ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿಲಂಕೇಶ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೆಲ ಮೂಲಭೂತ ಸಂಘಟನೆಗಳಿಂದ ಪ್ರಗತಿಪರ ಚಿಂತಕರಿಗೆ ಕೊಲೆ ಹಾಗೂ ಪ್ರಾಣ ಬೆದರಿಕೆ ದೂರವಾಣಿ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಲಾಗಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ 17 ಮಂದಿಗೆ ಭದ್ರತೆ ಒದಗಿಸಲಾಗಿದೆ.

ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆಗೈದ ಮಾದರಿಯಲ್ಲೇ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದರಿಂದ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಈ 17 ಮಂದಿಗೆ ತಲಾ ಇಬ್ಬರು ಕಾನ್‍ಸ್ಟೇಬಲ್‍ಗಳು ದಿನದ 24 ಗಂಟೆಯೂ ಭದ್ರತೆ ನೀಡಲಿದ್ದಾರೆ.

Facebook Comments

Sri Raghav

Admin