ಕಾಶ್ಮೀರದ ಸೋಪೋರ್‍ನಲ್ಲಿ ಎನ್‍ಕೌಂಟರ್‍ ಗೆ ಉಗ್ರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Encounter---1
ಶ್ರೀನಗರ, ಸೆ.9-ಕಾಶ್ಮೀರ ಕಣಿವೆಯಲ್ಲಿ ಎನ್‍ಕೌಂಟರ್‍ಗಳ ಮೂಲಕ ಉಗ್ರರನ್ನು ಯೋಧರು ಸದೆಬಡಿಯುತ್ತಿದ್ದರೂ, ಭಯೋತ್ಪಾದಕರ ದುಸ್ಸಾಹಸ ಮುಂದುವರಿದಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಂದು ಮತ್ತೊಬ್ಬ ಆತಂಕವಾದಿ ಬಲಿಯಾಗಿದ್ಧಾನೆ. ಸೋಪೋರ್‍ನ ರೆಬಾನ್ ಪ್ರದೇಶದಲ್ಲಿ ಉಗ್ರರು ಇರುವ ಖಚಿತ ಸುಳಿವಿನ ಮೇಲೆ ಯೋಧರು ಇಂದು ಮುಂಜಾನೆ ಆ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಉಗ್ರಗಾಮಿಗಳು ಸೇನಾಪಡೆ ಮೇಲೆ ಗುಂಡು ಹಾರಿಸಿದರು. ಆಗ ನಡೆದ ಎನ್‍ಕೌಂಟರ್‍ನಲ್ಲಿ ಉಗ್ರಗಾಮಿಯೊಬ್ಬ ಹತನಾದ.  ಆ ಪ್ರದೇಶದಲ್ಲಿರುವ ಅಡಗಿರುವ ಇತರ ಭಯೋತ್ಪಾದಕರ ಬೇಟೆಗಾಗಿ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

Facebook Comments

Sri Raghav

Admin