ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆ..!?

ಈ ಸುದ್ದಿಯನ್ನು ಶೇರ್ ಮಾಡಿ

Gauru-Lankesh-Dead

ಬೆಂಗಳೂರು, ಸೆ.9- ರಾಜ್ಯವನ್ನೇ ತಲ್ಲಣಗೊಳಿಸಿದ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಆದರೆ ಆರೋಪಿಗಳ ವಿವರ ಹಾಗೂ ಈ ಪ್ರಕರಣ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಶನಿವಾರ ವಿಕಾಸಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಆರೋಪಿಗಳ ಸುಳಿವು ಸಿಕ್ಕಿದೆ. ಈ ಸಂದರ್ಭದಲ್ಲಿ ಈ ವೇಳೆ ಇದನ್ನು ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದರೆ ತನಿಖೆಯ ದಿಕ್ಕು ತಪ್ಪುತ್ತದೆ. ಆದ್ದರಿಂದ ಹೆಚ್ಚಿನ ಮಾಹಿತಿಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಜಾಮ್‍ದಾರ್ ಅವರಿಗೆ ಬೆದರಿಕೆ ಇದೆ ಎಂಬುದು ಗೊತ್ತಾಗಿದೆ. ಅವರಿಗೂ ರಕ್ಷಣೆ ಕೊಡುತ್ತೇವೆ. ಸೀಜ್ ಮಾಡಿದ್ದ ಚಿನ್ನವನ್ನು ಮಾರಿ ಭೂಮಿ ಖರೀದಿಸಿದವರು ಎಸ್‍ಐಟಿ ಮುಖ್ಯಸ್ಥರಾಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಆಗಲ್ಲ. ನಾನೇನೆಂಬುದು ಮಾಧ್ಯಮದವರಿಗೆ ಗೊತ್ತು. ಯಾರೇ ಸಲಹೆ ಕೊಟ್ಟರೂ ಸ್ವೀಕರಿಸುತ್ತೇನೆ.

ಇಂದಿನ ಸಾಮಾನ್ಯ ಸಭೆಗೆ ಕೆಂಪಯ್ಯ ಅವರ ಹಾಜರಾತಿ ಅವಶ್ಯಕತೆ ಇಲ್ಲ. ಇದೊಂದು ಸಾಮಾನ್ಯ ಸಭೆ. ಯಾವಾಗ ಅಗತ್ಯ ಇರುತ್ತೋ ಅವಾಗ ಸಲಹೆ ಪಡೆಯುತ್ತೇನೆ. ನನಗೆ ಶಾಸಕನಾಗಿ, ಸಚಿವನಾಗಿ 34 ವರ್ಷ ಆಡಳಿತದ ಅನುಭವವಿದೆ. ಯಾರ ಸಲಹೆ ಯಾವಾಗ ಪಡೆಯಬೇಕೋ ಆಗ ಪಡೆಯುತ್ತೇನೆ. ಪ್ರತಿಪಕ್ಷ ಹಾಗೂ ಮಾಧ್ಯಮದವರ ಸಲಹೆಯನ್ನೂ ಪಡೆಯುತ್ತೇನೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸುವ ಸಲಹೆ ಕೊಟ್ಟಿದ್ದು ಸಿಎಂ ಅವರೇ. ಡಿಜಿಪಿಗೆ ಅಧಿಕಾರ ಕೊಟ್ಟಿದ್ದೇವೆ. ಅವರು ಎಸ್‍ಐಟಿಯನ್ನು ರಚನೆ ಮಾಡಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದರು.

Facebook Comments

Sri Raghav

Admin