ಗ್ರಂಥಾಲಯ ಅಪ್ರೆಂಟಿಸ್ ಟ್ರೈನಿಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

Recruitment-Job

ಬೆಂಗಳೂರು, ಸೆ.10- ಕರ್ನಾಟಕ ಸರ್ಕಾರ ಸಚಿವಾಲಯ ಗ್ರಂಥಾಲಯದಲ್ಲಿ 2017-18 ನೇ ಸಾಲಿನ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್ ಟ್ರೈನಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.  ಬ್ಯಾಚಲರ್ ಆಫ್ ಲೈಬ್ರರಿ ಆಂಡ್ ಇನ್ಪರ್ಮೇಷನ್ ಸೈನ್ಸ್ (ಬಿ.ಎಲ್.ಐ.ಎಸ್.ಸಿ) ವಿದ್ಯಾರ್ಹತೆ ಹೊಂದಿರುವವರು ಗ್ರಾಜುಯೆಟ್ ಅಪ್ರೆಂಟಿಸ್ ಟ್ರೈನಿ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) ಅರ್ಜಿ ಸಲ್ಲಿಸಬಹುದಾಗಿದ್ದು ಒಟ್ಟು 12 ಜನರಿಗೆ ಅವಕಾಶವಿದೆ, ಇವರುಗಳಿಗೆ ರೂ 10 ಸಾವಿರ, ಮಾಹೆಯಾನ ಸ್ಟೈಫಂಡ್ ನೀಡಲಾಗುವುದು.

ಡಿಪೋ ಇನ್ ಲೈಬ್ರವರಿ ಆಂಡ್ ಇನ್ಫರ್ಮೇಷನ್ ಸೈನ್ಸ್ ವಿದ್ಯಾರ್ಹತೆ ಹೊಂದಿರುವವರು ಟೆಕ್ನಿಶಿಯನ್ ಅಪ್ರೆಂಟಿಸ್ ಟ್ರೈನಿ (ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ) ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು 10 ಸ್ಥಾನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇವರುಗಳಿಗೆ ಸ್ಟೈಫಂಡ್ ರೂ. 8 ಸಾವಿರ ದೊರೆಯಲಿದೆ. ಟೆಕ್ನಿಶಿಯನ್ ಅಪ್ರೆಂಟಿಸ್ ಟ್ರೈನಿ (ಕಮರ್ಷಿಯಲ್ ಪ್ರಾಕ್ಟೀಸ್) ಗಾಗಿ ಡಿಪೋ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 2 ಸ್ಥಾನಗಳಿದ್ದು ಇವರುಗಳಿಗೆ ರೂ 8 ಸಾವಿರ ಮಾಹೆಯಾನ ಸ್ಟೈಫಂಡ್ ನೀಡಲಾಗುವುದು.

ನಿಗದಿತ ಶಿಕ್ಷರ್ಣಾತೆಯನ್ನು 2015 ಮೇ ತಿಂಗಳ ನಂತರ ಪಡೆದವರು ಮಾತ್ರ ಈ ತರಬೇತಿಗೆ ಅರ್ಹರಾಗಿರುತ್ತಾರೆ. ತರಬೇತಿಗೆ ಅಭ್ಯರ್ಥಿಗಳನ್ನು ಅವರು ಗಳಿಸಿದ ಅಂಕಗಳ (ಮೆರಿಟ್) ಹಾಗೂ ಮೀಸಲಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದವರಾಗಿದ್ದರೆ ಅಂತಹವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ ಎಂಬ ನಿಬಂಧನೆಯನ್ನು ಹಾಕಿದೆ. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಮುಖ್ಯ ಗ್ರಂಥಾಧಿಕಾರಿ, ಸಚಿವಾಲಯ ಗ್ರಂಥಾಲಯ, ಕೊಠಡಿ ಸಂಖ್ಯೆ 11, ನೆಲಮಹಡಿ, ವಿಧಾನಸೌಧ, ಬೆಂಗಳೂರು 560 001 ಇವರಿಗೆ ಸೆಪ್ಟೆಂಬರ್ 16 ರೊಳಗಾಗಿ ತಲುಪುವಂತೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ವೆಬ್‍ಸೈಟ್ http://vslib.kar.nic.in/ ರಲ್ಲಿ ಪಡೆಯಬಹುದಾಗಿದೆ ಎಂದು ಸಚಿವಾಲಯ ಗ್ರಂಥಾಲಯದ ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin

One thought on “ಗ್ರಂಥಾಲಯ ಅಪ್ರೆಂಟಿಸ್ ಟ್ರೈನಿಗಳ ನೇಮಕಾತಿಗೆ ಅರ್ಜಿ ಆಹ್ವಾನ

Comments are closed.