ಗ್ರಾಪಂ ಕಾರ್ಯದರ್ಶಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಸೆ.9- ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ಮನನೊಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುನೀತ್‍ಕುಮಾರ್(29)ಎಂಬುವರೇ ಸಾವಿಗೀಡಾದ ದುರ್ದೈವಿಯಾಗಿದ್ದು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದರೆಂದು ತಿಳಿದು ಬಂದಿದೆ. ಇವರ ತಂದೆ ಗ್ರಾಮ ಪಂಚಾಯ್ತಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ನಂತರ ಬಡ್ತಿ ಪಡೆದು ಮಾಗಡಿ ತಾಲ್ಲೂಕಿನ ಹುಳ್ಳೇನಹಳ್ಳಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕೆಲ ವರ್ಷದ ಹಿಂದೆಯಷ್ಟೆ ಹೃದಯಾಘಾತದಿಂದ ನಿಧನ ಹೊಂದಿದ್ದರು.

ಅನುಕಂಪದ ಆಧಾರದ ಮೇಲೆ ಪುನೀತ್‍ಕುಮಾರ್‍ಗೆ ಕೆಲಸ ದೊರೆತಿದ್ದು ಕಳೆದ ಒಂದೂವರೆ ವರ್ಷದಿಂದ ತಿಟ್ಟಮಾರನಹಳ್ಳಿ ಗ್ರಾಪಂನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ಗಾಗಿ 2 ಲಕ್ಷ ರೂ.ಪಾಯಿಗಳಷ್ಟು ಹಣವನ್ನು ಜೂಜು ಕಟ್ಟಿದ್ದು ಇದರಲ್ಲಿ ಸೋತು ಹೋದ್ದರಿಂದ ಆತ್ಮಹತ್ಯೆಗೆ ಮುಂದಾಗಿರಬಹುದೆಂಬ ಅನುಮಾನಗಳು ಕೇಳಿ ಬಂದಿದೆ.

Facebook Comments

Sri Raghav

Admin