ಜೈಪುರದಲ್ಲಿ ಹಿಂಸಾಚಾರ : ಗೋಲಿಬಾರ್‍ಗೆ ಒಬ್ಬ ಬಲಿ, ಕಫ್ರ್ಯೂ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Jaipur--01

ಜೈಪುರ, ಸೆ.9-ದಂಪತಿ ಮೇಲೆ ಪೇದೆಯೊಬ್ಬ ನಡೆಸಿದನೆನ್ನಲಾದ ಹಲ್ಲೆ ಖಂಡಿಸಿ ಹಿಂಸಾಚಾರಕ್ಕೆ ಇಳಿದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‍ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಅನೇಕರು ಗಾಯಗೊಂಡ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಪವರ್‍ಹೌಸ್ (ವಿದ್ಯುತ್ ಘಟಕ) ಮತ್ತು ಹಲವಾರು ವಾಹನಗಳು ಭಸ್ಮವಾಗಿವೆ. ನಗರದ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಹಿಂಸೆಗಿಳಿಯುವವರ ಮೇಲೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ.

ವದಂತಿಗಳು ಹಬ್ಬುವುದನ್ನು ತಡೆಗಟ್ಟಲು ನರದಲ್ಲಿ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಶಾಲೆ-ಕಾಲೇಜುಗಳನ್ನು ಮುಚ್ಚಲಾಗಿದೆ. ಜೈಪುರದ ರಾಮ್‍ಗಂಜ್ ಪ್ರದೇಶದಲ್ಲಿ ಪೊಲೀಸ್ ಪೇದೆ ಮತ್ತು ಮೋಟಾರ್ ಸೈಕಲ್‍ನಲ್ಲಿ ತೆರಳುತ್ತಿದ್ದ ದಂಪತಿ ನಡುವೆ ಉಂಟಾದ ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿ ಘರ್ಷಣೆ ರಣರಂಗವಾಗಿ ಮಾರ್ಪಟ್ಟಿದೆ.

Facebook Comments

Sri Raghav

Admin