ದಸರಾ ಆನೆ-ಕುದುರೆಗಳಿಗೆ ಸಿಡಿಮದ್ದಿನ ತಾಲೀಮು

Dasara--2017-Elephants

ಮೈಸೂರು, ಸೆ.9- ದಸರಾದಲ್ಲಿ ಪಾಲ್ಗೊಳ್ಳಲಿರುವ 15 ಆನೆಗಳು ಹಾಗೂ 24 ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸಲಾಯಿತು. ಮೈಸೂರು ಅರಮನೆ ಪಾರ್ಕಿಂಗ್ ಸ್ಥಳದಲ್ಲಿ ಸಿಡಿಮದ್ದು ಸಿಡಿಸುವ ಮೂಲಕ ತಾಲೀಮು ನಡೆಸಲಾಯಿತು. ಜಂಬೂ ಸವಾರಿ ದಿನ ಶುಭ ಸಂಕೇತವಾಗಿ 21 ಬಾರಿ ಕುಶಾಲ ತೋಪು ಸಿಡಿಸಲಾಗುತ್ತದೆ. ಇದರಿಂದ ಆನೆಗಳು ಮತ್ತು ಕುದುರೆಗಳು ಹೆದರದಿರಲಿ ಎಂಬ ಉದ್ದೇಶದಿಂದ ಇವುಗಳಿಗೆ ತಾಲೀಮು ನಡೆಸಲಾಯಿತು.

ಹೊಸದಾಗಿ ಬಂದಿದ್ದ ಮೂರು ಆನೆಗಳು ಮೊದಲ ಬಾರಿ ಸಿಡಿಮದ್ದು ಸಿಡಿಸಿದಾಗ ಓಡಿದವು. ನಂತರ ಎರಡನೆ ಬಾರಿ ಸಿಡಿಸಿದಾಗ ಹಾಗೆ ನಿಂತಿದ್ದು ಕಂಡುಬಂತು. ವಿಜಯ, ಗೋಪಾಲಸ್ವಾಮಿ, ಕೃಷ್ಣ ಆನೆಗಳು ಬೆದರಿ ಗೀಳಿಟ್ಟವು. ಕೆಲವು ಕುದುರೆಗಳು ಸಿಡಿಮದ್ದಿನಿಂದ ಚೀರಾಡಿದ್ದು, ನಂತರ ಸುಮ್ಮನಾಗಿದ್ದು ಕಂಡುಬಂತು.

Facebook Comments

Sri Raghav

Admin