ದಸರಾ ವೇಳೆ ಬಾಯಲ್ಲಿ ನೀರುರಿಸುವ ಖಾದ್ಯಗಳು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.9- ಮೈಸೂರು ದಸರಾ ಮಹೋತ್ಸವ ಆಕರ್ಷಣೆಗಳಲ್ಲಿ ಒಂದಾದ ಆಹಾರ ಮೇಳದಲ್ಲಿ ಈ ಬಾರಿಯೂ ಆದಿವಾಸಿಗಳು ಆಗಮಿಸಿ ರುಚಿಕಟ್ಟಾದ, ಆರೋಗ್ಯಕರವಾದ, ಪೌಷ್ಠಿಕವಾದ ಬುಡಕಟ್ಟು ಆಹಾರವನ್ನು ಸಿದ್ಧಪಡಿಸಲಿದ್ದಾರೆ. ಇಂತಹ ಬುಡಕಟ್ಟು ಆಹಾರ ಸಿದ್ಧಪಡಿಸುವ ಆದಿವಾಸಿಗಳನ್ನು ಜಿಲ್ಲಾಡಳಿತದ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಆಹಾರ ಮೇಳವು ಈ ಬಾರಿ ಸ್ಕೌಟ್ ಅಂಡ್ ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್‍ನಲ್ಲಿ ನಡೆಯಲಿದೆ. ಮೇಳದಲ್ಲಿ 10 ಜಿಲ್ಲೆಗಳ ಬುಡಕಟ್ಟು ಸಮುದಾಯದವರು ಭಾಗವಹಿಸಿ ಬುಡಕಟ್ಟು ಆಹಾರವನ್ನು ನಗರ ಪ್ರದೇಶಿಗರಿಗೆ ಉಣಬಡಿಸಲಿದ್ದಾರೆ.

ಬುಡಕಟ್ಟು ಆಹಾರದ ಮೆನು:

ಬಂಬೂ ಬಿರಿಯಾನಿ, ಮುತ್ತಿಗೆ ಹಾಳೆ, ರಾಗಿ ರೊಟ್ಟಿ, ಕುಂಬಳಕಾಯಿ, ಅವೆ ಕಾಳು ಗೊಜ್ಜು, ಬತ್ತದ ಪಾಯಸ, ಮಾಗಡಿ ಬೇರು-ಟೀ-ಕಾಫಿ, ಬಿದಿರು-ಕಳಲೆ ಸಾರು, ನಳ್ಳಿ ಸಾರು ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಲಿದ್ದಾರೆ. ಇವೆಲ್ಲವನ್ನೂ ಸವಿಯಬೇಕಾದರೆ ಮೈಸೂರು ದಸರಾವರೆಗೂ ಕಾಯಲೇಬೇಕು.

Facebook Comments

Sri Raghav

Admin