ಬುಡಕಟ್ಟು ಯುವತಿ ಮೇಲೆ ಗ್ಯಾಂಗ್ ರೇಪ್ : 16 ಯುವಕರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

16-Arrested--01

ರಾಂಚಿ, ಸೆ.9- ಜಾರ್ಖಂಡ್‍ನ ಡುಮ್ಕಾದಲ್ಲಿ ಬುಡಕಟ್ಟು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 16 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತರಲ್ಲಿ ಏಳು ಮಂದಿ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದರೆ, ಉಳಿದವರು ಈ ಕೃತ್ಯಕ್ಕೆ ನೆರವಾಗಿದ್ದರು ಎಂದು ಡುಮ್ಕಾ ಪೊಲೀಸರು ತಿಳಿಸಿದ್ದಾರೆ. ಬಂಧಿತರು 18 ರಿಂದ 24ರ ವಯೋಮಾನದವರು.  ಸೆಪ್ಟೆಂಬರ್ 6ರಂದು ರಾತ್ರಿ ಯುವತಿ ತನ್ನ ಗೆಳೆಯನೊಂದಿಗೆ ಬೈಕ್ ಮೇಲೆ ಡುಮ್ಕಾದ ನಿರ್ಜನ ಪ್ರದೇಶದಲ್ಲಿ ತೆರಳುತ್ತಿದ್ದಾಗ ಈ ಯುವಕರು ಅವರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡಿ, 5,000 ರೂ.ಗಳನ್ನು ನೀಡುವಂತೆ ಒತ್ತಾಯಿಸಿದರು. ಹಣ ನೀಡಲು ನಿರಾಕರಿಸಿದಾಗ ಯುವತಿಯನ್ನು ಹತ್ತಿರದ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದರು.

ತೀವ್ರ ಅಸ್ವಸ್ಥಳಾಗಿ ಪ್ರಜ್ಞಾಶೂನ್ಯಳಾಗಿದ್ದ ಯುವತಿಯನ್ನು ನಂತರ ಡುಮ್ಕಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು, 12 ತಾಸುಗಳ ಬಳಿಕೆ ಆಕೆಗೆ ಪ್ರಜ್ಞೆ ಮರಳಿತ್ತು. ಕಾಮುಕ ಯುವಕರನ್ನು ಸೆರೆ ಹಿಡಿಯಲು ವಿಶೇಷ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ಘಟನೆ ನಡೆದ 48 ಗಂಟೆಗಳ ಒಳಗೆ ಯುವಕರನ್ನು ಪೊಲೀಸರು ಬಂಧಿಸಿದರು.

Facebook Comments

Sri Raghav

Admin