ಬೋಗಿಯಿಂದ ಬೇರ್ಪಟ್ಟು 1 ಕಿಮೀ ಸಾಗಿದ ಎಂಜಿನ್..!

ಈ ಸುದ್ದಿಯನ್ನು ಶೇರ್ ಮಾಡಿ

Train--02

ಬಾದೋಹಿ, ಸೆ.9-ದೇಶದ ವಿವಿಧೆಡೆ ಅದರಲ್ಲೂ ಉತ್ತರ ಪ್ರದೇಶದಲ್ಲಿ ರೈಲು ಅವಘಡಗಳ ಸರಣಿ ಮುಂದುವರಿದಿದ್ದು, ನವದೆಹಲಿ-ಮುಂದುವಾದಿಹ್ ಶಿವಗಂಗಾ ಎಕ್ಸ್‍ಪ್ರೆಸ್‍ನ ಎಂಜಿನ್ ಬೋಗಿಯಿಂದ ಬೇರ್ಪಟ್ಟು ಒಂದು ಕಿ.ಮೀ. ಸಾಗಿದ ಪ್ರಸಂಗ ಸಂಭವಿಸಿದೆ.  ಉತ್ತರ ಪ್ರದೇಶದ ಜ್ಞಾನಪುರ ರೈಲು ನಿಲ್ದಾಣ ತಲುಪುವ ಸಂದರ್ಭದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಜ್ಞಾನಪುರ ಮತ್ತು ಜಂಗಿಗಂಜ್ ರೈಲ್ವೆ ಸ್ಟೇಷನ್‍ಗಳ ನಡುವೆ ಎಂಜಿನ್ ರೈಲ್ವೆ ಬೋಗಿಯಿಂದ ಪ್ರತ್ಯೇಕಗೊಂಡು ಒಂದು ಕಿ.ಮೀ. ದೂರ ಹೊರಟುಹೋಗಿದೆ ಎಂದು ಸ್ಟೇಷನ್ ಮಾಸ್ಟರ್ ಅಶೋಕ್ ಕುಮಾರ್ ಹೇಳಿದ್ಧಾರೆ. ಬಳಿಕ ಗೇಟ್ ನಂಬರ್ 42-ಬಿನಲ್ಲಿ ಬೋಗಿಗಳನ್ನು ಇಂಜಿನ್‍ಗೆ ಸೇರಿಸಲಾಯಿತು.

Train--0

Train--1

Facebook Comments

Sri Raghav

Admin