ಭಾರತೀಯ ನೌಕಾ ಪಡೆ ಮಹಿಳಾ ತಂಡದ ಪ್ರಪಂಚ ಪರ್ಯಟನೆಗೆ ನಾಳೆ ಚಾಲನೆ

Nirmala-Seetaraman--01

ಪಣಜಿ,ಸೆ.9-ಭಾರತೀಯ ನೌಕಾ ಪಡೆಯ ಮಹಿಳಾ ತಂಡ ನಾಳೆಯಿಂದ ವಿಶ್ವ ಪ್ರದಕ್ಷಿಣೆ ಅಭಿಯಾನ ಆರಂಭಿಸಲಿದ್ದು , ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈ ಮಹಾಯಾನಕ್ಕೆ ಗೋವಾ ರಾಜಧಾನಿ ಪಣಜಿಯಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಪುಟ್ಟ ನಾವೆಯೊಂದರ ಮೂಲಕ ಮಹಿಳಾ ತಂಡ ಇದೇ ಪ್ರಪ್ರಥಮ ಬಾರಿಗೆ ಪ್ರಪಂಚ ಪರ್ಯಟನೆ ಕೈಗೊಂಡಿದೆ.

ಪಣಜಿ ಸಮೀಪದ ವೆರೆಮ್‍ನ ಐಎನ್‍ಎಸ್ ಮಾಂಡೋವಿ ದೋನಿ ಕೊಳದಿಂದ ನಾಳೆ ಮಧ್ಯಾಹ್ನ 12.30ಕ್ಕೆ ವಿಶ್ವ ಪ್ರದಕ್ಷಿಣೆ ಆರಂಭವಾಗಲಿದ್ದು , ನಿರ್ಮಲಾ ಸೀತಾರಾಮನ್ ಹಸಿರು ನಿಶಾನೆ ತೋರಲಿದ್ದಾರೆ ಎಂದು ಭಾರತೀಯ ವಾರ್ತಾ ಮಾಹಿತಿ ಶಾಖೆ(ಪಿಐಬಿ) ತಿಳಿಸಿದೆ.  ದೇಶಿ ನಿರ್ಮಿತ ಐಎನ್‍ಎಸ್‍ವಿ ತರಿಣಿ ಹಾಯಿ ದೋಣಿ ಮೂಲಕ ಈ ಸಾಹಸಯಾನ ಆರಂಭವಾಗಲಿದ್ದು , ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಅನೇಕ ಸಾಗರಗಳು, ಸಮುದ್ರಗಳು ಮತ್ತು ಸರೋವರಗಳನ್ನು ನೌಕಾ ಪಡೆಯ ವೀರ ವನಿತೆಯರು ದಾಟಲಿದ್ದಾರೆ.   ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳ ಬಂದರುಗಳಲ್ಲಿ ಈ ತಂಡ ವಿಶ್ರಾಂತಿ ಪಡೆಯಲಿದೆ.

Facebook Comments

Sri Raghav

Admin