ಮಹಾರಾಷ್ಟ್ರದಲ್ಲೂ 55 ಶಿಶುಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Baby-Child

ಮುಂಬೈ, ಸೆ.9-ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮಕ್ಕಳ ಸರಣಿ ಸಾವಿನ ಸುದ್ದಿ ಆತಂಕಕ್ಕೀಡು ಮಾಡಿರುವಾಗಲೇ ಮಹಾರಾಷ್ಟ್ರದಲ್ಲೂ ಕಳೆದ ಆಗಸ್ಟ್‍ನಲ್ಲಿ 55 ಶಿಶುಗಳು ಮೃತಪಟ್ಟಿರುವುದು ವರದಿಯಾಗಿದೆ. ನಾಸಿಕ್‍ನ ಸಿವಿಲ್ ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ನಿಗಾ ಘಟಕದಲ್ಲಿ ಕಳೆದ ತಿಂಗಳು 55ಕ್ಕೂ ಹೆಚ್ಚು ಮಕ್ಕಳು ಅಸುನೀಗಿದ್ದಾರೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಹಸುಳೆಗಳು ಸಾವನಪ್ಪಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ ಕಳೆದ ಏಪ್ರಿಲ್‍ನಿಂದ 187 ಮಕ್ಕಳು ಸಾವಗೀಡಾಗಿದ್ದು, ಕಳೆದ ಆಗಸ್ಟ್‍ನಲ್ಲಿ 55 ಶಿಶುಗಳು ಮರಣಹೊಂದಿವೆ ಎಂದು ಸಿವಿಲ್ ಸರ್ಜನ್ ಡಾ.ಸುರೇಶ್ ಜಗ್ವಾಳೆ ತಿಳಿಸಿದ್ದಾರೆ.  ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದ ಮಕ್ಕಳು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಇದ್ದಾಗ ನಮ್ಮ ಆಸ್ಪತ್ರೆಗೆ ದಾಖಲಿಸಲಾಯಿತು. ಅವಧಿಪೂರ್ವ ಜನನ, ಶ್ವಾಸಕೋಶ ದುರ್ಬಲತೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಶಿಶುಗಳು ಮೃತಪಟ್ಟಿವೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin