ಮಾಗಡಿ ಸಮೀಪ ಕೆರೆಗೆ ಉರುಳಿ ಬಿದ್ದ ಕೇರಳ ಪ್ರವಾಸಿ ಬಸ್ : ಇಬ್ಬರು ವಿದ್ಯಾರ್ಥಿಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

CMK-Accident--01

ಚಿಕ್ಕಮಗಳೂರು,ಸೆ.9-ಕೇರಳದಿಂದ ಬಂದಿದ್ದ ಪ್ರವಾಸಿ ಬಸ್‍ವೊಂದು ಬೇಲೂರು-ಚಿಕ್ಕಮಗಳೂರು ಹೆದ್ದಾರಿಯ ಮಾಗಡಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದು ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೇರಳದವರೇ ಆದ ಐರಿನ್ ಮರಿಯಾ ಜಾರ್ಜ್(20), ಮರಿನ್ ಸೆಬಾಸ್ಟಿಯನ್(20) ಮೃತ ವಿದ್ಯಾರ್ಥಿಗಳು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದವರನ್ನು ಜಿಲ್ಲಾಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

CMK-Accident--02

ಕೇರಳದ ಕೊಟ್ಟಾಯಂನ ಅಮುನ್ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನ ತೃತೀಯ ವರ್ಷದ ಎಲೆಕ್ಟ್ರಾನಿಕಲ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೂರು ಬಸ್‍ಗಳಲ್ಲಿ ಕರ್ನಾಟಕ ಪ್ರವಾಸ ಕೈಗೊಂಡಿದ್ದರು.  ಬೆಂಗಳೂರು, ಮೈಸೂರು ಪ್ರವಾಸ ಮುಗಿಸಿಕೊಂಡು ಚಿಕ್ಕಮಗಳೂರಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ ವಾಪಸ್ ಕೇರಳಕ್ಕೆ ತೆರಳುತ್ತಿದ್ದಾಗ ಒಂದು ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.
ಕೆರೆಯಲ್ಲಿ ಹೆಚ್ಚು ನೀರು ಇಲ್ಲವಾದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ. ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಬಸ್‍ನ್ನು ಹೊರತೆಗೆದಿದ್ದಾರೆ.

CMK-Accident--03

Facebook Comments

Sri Raghav

Admin