ಮೆಕ್ಸಿಕೋದಲ್ಲಿ ಭಾರೀ ಭೂಕಂಪ : ಸಾವಿನ ಸಂಖ್ಯೆ 64ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Mexico-01

ಮೆಕ್ಸಿಕೊ ಸಿಟಿ, ಸೆ.9-ಮೆಕ್ಸಿಕೊ ಕರಾವಳಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 64ಕ್ಕೇರಿದೆ. ಈ ದುರಂತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಇದು ಮೆಕ್ಸಿಕೋದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳಲ್ಲಿ ಒಂದಾಗಿದೆ. ಮೆಕ್ಸಿಕೋ ಕರಾವಳಿಯಲ್ಲಿ ಗುರುವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 8.1ರಷ್ಟು ತೀವ್ರತೆಯ ಭೂಕಂಪ ಸಂಭವಿತ್ತು. ಭೂಕಂಪದೊಂದಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಿದ ನಂತರ ಸುಮಾರು 10 ಅಡಿಗಳಷ್ಟು ಎತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

Mexico-04

ಭೂಕಂಪದ ತೀವ್ರತೆಗೆ ದಕ್ಷಿಣ ಮೆಕ್ಸಿಕೋ ಅನೇಕ ಕಟ್ಟಡಗಳು ಮತ್ತು ಮನೆಗಳು ಬಿರುಕು ಬಿಟ್ಟಿವೆ. ಓಕ್ಟಾಕ ಮತ್ತು ಜುಟುಕಿನ್ ಪ್ರದೇಶಗಳಲ್ಲಿ ಹೆಚ್ಚು ಸಾವು-ನೋವು ಉಂಟಾಗಿದೆ.  ಇದು 1985ರಲ್ಲಿ ಸಂಭವಿಸಿದ ಭೂಕಂಪಕ್ಕಿಂತಲೂ ಪ್ರಬಲವಾಗಿತ್ತು ಎಂದು ವರದಿಯಾಗಿದೆ. ಆಗ ಸಂಭವಿಸಿದ ನೈಸರ್ಗಿಕ ದುರಂತದಿಂದ ಮೆಕ್ಸಿಕೋ ಸಿಟಿಯ ಬಹುಭಾಗ ನಿರ್ನಾಮವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆದರೆ ಈ ಬಾರಿ ಹೆಚ್ಚಿನ ಹಾನಿಯಾಗಿಲ್ಲ.

Mexico-03

Mexico-02

Facebook Comments

Sri Raghav

Admin