ವಿಶ್ವ ಹಿಂದೆಂದಿಗಿಂತಲೂ ಈಗ ಅತ್ಯಂತ ಅಪಾಯದಲ್ಲಿದೆ : ನ್ಯಾಟೋ ಮುಖ್ಯಸ್ಥರ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Nato--01

ನ್ಯೂಯಾರ್ಕ್, ಸೆ.9-ವಿಶ್ವವು ಹಿಂದೆಂದಿಗಿಂತಲೂ ಅತ್ಯಂತ ಅಪಾಯದಲ್ಲಿದೆ ಎಂದು ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್) ಮುಖ್ಯಸ್ಥ ಜೆನ್ಸ್ ಸ್ಟೋಲ್‍ಟೆನ್‍ಬರ್ಗ್ ಆತಂಕ ವ್ಯಕ್ತಪಡಿಸಿದ್ದಾರೆ.  ಉತ್ತರ ಕೊರಿಯಾದ ಸಮೂಹ ನಾಶ ಶಸ್ತ್ರಾಸ್ತ್ರಗಳ ಪ್ರಯೋಗ, ವಿವಿಧ ದೇಶಗಳಲ್ಲಿ ಭಯೋತ್ಪಾದಕರ ಅಟ್ಟಹಾಸ, ಐರೋಪ್ಯ ಗಡಿಗಳಲ್ಲಿ ರಷ್ಯಾದ ಭಾರೀ ಸೇನೆ ಜಮಾವಣೆ ಮೊದಲಾದ ಗಂಭೀರ ವಿದ್ಯಮಾನಗಳನ್ನು ಉಲ್ಲೇಖಿಸಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ ಸನ್ನಿವೇಶ ಅತ್ಯಂತ ಅಪಾಯಕಾರಿಯಾಗಿದೆ. ಆತಂಕಗಳು ಮತ್ತು ಸವಾಲುಗಳು ಬೃಹದಾಕಾರ ಪಡೆಯುತ್ತಿವೆ. ವಿಶ್ವಕ್ಕೆ ದೊಡ್ಡ ಭೀತಿ ಎದುರಾಗಿದೆ ಎಂದು ಗಾರ್ಡಿಯನ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನ್ಯಾಟೋ ಮಹಾ ಪ್ರಧಾನ ಕಾರ್ಯದರ್ಶಿ ವಿಶ್ಲೇಷಿಸಿದ್ದಾರೆ.  ನನ್ನ ವೃತ್ತಿ ಬದುಕಿನ 30 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಆತಂಕವನ್ನು ನಾನು ಕಂಡಿಲ್ಲ. ಒಂದೆಡೆ ಉತ್ತರ ಕೊರಿಯಾ ಮಾರಕ ಕ್ಷಿಪಣಿ-ಅಣ್ವಸ್ತ್ರಗಳನ್ನು ಪ್ರಯೋಗಿಸುತ್ತಾ ಕದನೋತ್ಸಾಹದಲ್ಲಿದೆ. ಮತ್ತೊಂದೆಡೆ ಭಯೋತ್ಪಾದಕರು ಬಲಿಷ್ಠರಾಗುತ್ತಾ ಹಿಂಸಾಚಾರ ನಡೆಸುತ್ತಿದ್ದಾರೆ. ಒಟ್ಟಾರೆ ಈ ಜಗತ್ತು ಹೆಚ್ಚು ಅಪಾಯದಲ್ಲಿದೆ ಎಂದು ಸ್ಟೋಲ್‍ಟನ್‍ಬರ್ಗ್ ಹೇಳಿದ್ದಾರೆ.

Facebook Comments

Sri Raghav

Admin