ಹೈದರಾಬಾದ್ ಏರ್ಪೋರ್ಟ್ನಲ್ಲಿ 29 ಲಕ್ಷ ಬೆಲೆಯ ಚಿನ್ನದ ಗಟ್ಟಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

Hydarabad-Gold--01

ಹೈದರಾಬಾದ್, ಸೆ.9-ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 29.19 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಎಮಿರೇಟ್ಸ್ ವಿಮಾನದ ಮೂಲಕ ದುಬೈನಿಂದ ನಿನ್ನೆ ಬಂದಿಳಿದ ವ್ಯಕ್ತಿಯನ್ನು ವಿಮಾನನಿಲ್ದಾಣ ಅಧಿಕಾರಿಗಳು ಮತ್ತು ಸೀಮಾಸುಂಕ ಸಿಬ್ಬಂದಿ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆತನ ಪ್ಯಾಂಟ್‍ಗಳ ಪಾಕೆಟ್‍ಗಳು ಮತ್ತು ಕಾಲುಚೀಲಗಳಲ್ಲಿ 932 ಗ್ರಾಂ ಚಿನ್ನದ ಸಣ್ಣ ಗಟ್ಟಿಗಳು ಇದ್ದವು. ಇವುಗಳ ಮೇಲೆ ವಿದೇಶ ಮುದ್ರೆ ಇದ್ದವು. ಬಂಗಾರದ ಮೌಲ್ಯ 29.10 ಲಕ್ಷ ರೂ.ಗಳು ಎಂದು ಅಂದಾಜು ಮಾಡಲಾಗಿದೆ.

Facebook Comments

Sri Raghav

Admin