ಆಂಧ್ರ ಗಡಿಯಲ್ಲಿ ಗೌರಿ ಹಂತಕರಿಗಾಗಿ ಎಸ್‍ಐಟಿ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಸೆ.10- ಸಿಸಿ ಟಿವಿ ಫುಟೇಜ್‍ನೊಂದಿಗೆ ನಕ್ಸಲ್ ಪೀಡಿತ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಡಿವೈಎಸ್‍ಪಿ ನೇತೃತ್ವದ ಎಸ್‍ಐಟಿ ವಿಶೇಷ ತಂಡವೊಂದು ಪತ್ರಕರ್ತೆ ಗೌರಿ ಹಂತಕರಿಗಾಗಿ ಶೋಧ ನಡೆಸುತ್ತಿದೆ. ಗೌರಿ ಹತ್ಯೆಗೆ ನಕ್ಸಲರೇ ಕಾರಣವಿರಬಹುದು ಎಂಬ ಶಂಕೆ ಮೇಲೆ ಕಾರ್ಯಾಚರಣೆಗಿಳಿದಿರುವ ಒಂದು ತಂಡ ಕರ್ನಾಟಕ-ಆಂಧ್ರ ಗಡಿ ಪ್ರದೇಶಗಳಾದ ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಪಾವಗಡ, ಆಂಧ್ರದ ಚಿತ್ತೂರು, ಅನಂತ್‍ಪುರ ಮತ್ತಿತರ ಪ್ರದೇಶಗಳಲ್ಲಿ ಹಂತಕರ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಗೌರಿ ಲಂಕೇಶ್ ಅವರ ನಿವಾಸದಲ್ಲಿ ದೊರೆತ ಸಿಸಿ ಕ್ಯಾಮೆರಾದ ದೃಶ್ಯಾವಳಿಯಲ್ಲಿ ಕಂಡು ಬಂದಿರುವ ಜಾಕೇಟ್ ಧರಿಸಿ ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದ ಆಗಂತುಕ ಹಂತಕನ ಚಹರೆ ಆಧಾರದ ಮೇಲೆ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದೆ. ಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ ಕೊಂಡಿರುವವರು ಹಾಗೂ ನಕ್ಸಲರ ಬಗ್ಗೆ ಅನುಕಂಪ ಹೊಂದಿರುವ ವ್ಯಕ್ತಿಗಳನ್ನು ವಿಶೇಷ ತಂಡ ತೀವ್ರ ವಿಚಾರಣೆ ಗೊಳಪಡಿಸಿದೆ. ತಮ್ಮ ಬಳಿ ಇರುವ ಹಂತಕನ ಚಹರೆ ಬಗ್ಗೆ ಅಲ್ಲಿನ ಸ್ಥಳೀಯರಿಗೆ ತಿಳಿಸಿ ಮಾಹಿತಿ ಪಡೆಯುವ ಯತ್ನ ನಡೆಸಲಾಗುತ್ತಿದೆ.

ಹಂತಕರನ್ನು ಬಂಧಿಸುವಂತೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎಸ್‍ಐಟಿ ತಂಡಗಳು ಆಂಧ್ರ ಗಡಿ ಭಾಗವಲ್ಲದೆ, ನಕ್ಸಲ್ ಚಟುವಟಿಕೆ ಹೆಚ್ಚಿರುವ ಮಹಾರಾಷ್ಟ್ರ, ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಲ್ಲೂ ಹಂತಕರಿಗಾಗಿ ಶೋಧ ನಡೆಸುತ್ತಿವೆ. ನಕ್ಸಲರೇ ಗೌರಿ ಹತ್ಯೆ ನಡೆಸಿರಬಹುದು ಎಂಬ ಶಂಕೆ ಇದ್ದರೂ ಬಲಪಂಥೀಯ ಸಂಘಟನೆಗಳ ಮೇಲೂ ಗಮನಹರಿಸಿದ್ದು, ವಿವಿಧ ಕೋನಗಳಿಂದ ಎಸ್‍ಐಟಿ ಪೆÇಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Facebook Comments

Sri Raghav

Admin