ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Team-India

ನವದೆಹಲಿ, ಸೆ.10- ಆಸ್ಟ್ರೇಲಿಯಾ ವಿರುದ್ದ ಸೆ.17ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ. ಐದು ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಟೀಂ ಇಂಡಿಯಾವನ್ನು ಪ್ರಕಟ ಮಾಡಿದೆ. ಇತ್ತೀಚೆಗಷ್ಟೇ ನಡೆದ ಶ್ರೀಲಂಕಾ ವಿರುದ್ಧ ಟೆಸ್ಟ್ , ಏಕದಿನ ಹಾಗೂ ಟಿ-20 ಸರಣಿಯಲ್ಲಿ ವೈಟ್ ವಾಶ್ ಮಾಡಿರುವ ಭಾರತ, ಪ್ರಬಲ ಕಾಂಗರೂ ತಂಡವನ್ನು ರಚಿಸಲಿದೆ.
ಶ್ರೀಲಂಕಾ ವಿರುದ್ದ ಆಡಿರುವ ತಂಡವನ್ನು ಕಣಕ್ಕಿಳಿಸಲಿದ್ದು , ಆಲ್ ರೌಂಡರ್ ಆದ ಆರ್.ಅಶ್ವಿನ್ ಹಾಗೂ ಜಡೇಜಗೆ ಸ್ಥಾನ ಸಿಕ್ಕಿಲ್ಲ. ಕರ್ನಾಟಕದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆಗೆ ಸ್ಥಾನ ಸಿಕ್ಕಿದೆ.

ಭಾರತ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ(ಉಪನಾಯಕ), ಎಂ.ಎಸ್.ಧೋನಿ, ಶಿಖರ್ ಧವನ್, ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಅಜಿಂಕ್ಯಾ ರಹಾನೆ, ಕುಲದೀಪ್ ಯಾದವ್, ಜಸ್ಮಿತ್ ಬುಮ್ರಾ, ಅಕ್ಷರ್ ಪಟೇಲ್, ಕೇದರ್ ಜಾಧವ್ ತಂಡದಲ್ಲಿದ್ದಾರೆ.

Facebook Comments

Sri Raghav

Admin