ಟಿಕೆಟ್ ಇಲ್ಲದೆ ಬಸ್‍ನಲ್ಲಿ ಪ್ರಯಾಣಿಸಿದ ಪಾರಿವಾಳಗಳು : ಕಂಡಕ್ಟರ್‍ಗೆ ಶಿಕ್ಷೆ ..!

ಈ ಸುದ್ದಿಯನ್ನು ಶೇರ್ ಮಾಡಿ

Bus--01

ಚೆನ್ನೈ , ಸೆ. 10- ಬಸ್‍ನಲ್ಲಿ ಟಿಕೆಟ್ ಇಲ್ಲದೆ ಪಾರಿವಾಳಗಳು ಪ್ರಯಾಣಿಸುತ್ತಿದ್ದರಿಂದ ಬಸ್ ಕಂಡಕ್ಟರ್‍ಗೆ ನಾಳೆ ಶಿಕ್ಷೆ ನೀಡಲಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.ಕಳೆದ ಗುರುವಾರ ತಮಿಳುನಾಡಿನ ಸಾರಿಗೆ ಬಸ್ಸೊಂದು ಹರೂರ್‍ನಿಂದ ಯಲವಾಡದ ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ತನಿಖಾಧಿಕಾರಿಗಳು ಬಸ್ ಅನ್ನು ಪರಿಶೀಲಿಸುವಾಗ ಪಾರಿವಾಳಗಳು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದನ್ನು ಕಂಡು ಬಂದಿದೆ.

ಬಸ್‍ನಲ್ಲಿ ಪ್ರಾಣಿಗಳು ಹಾಗೂ ಪಕ್ಷಿಗಳ ಸಾಗಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು ಬಸ್ ಕಂಡಕ್ಟರ್ ಹಣದ ಆಸೆಗಾಗಿ ಈ ಪಾರಿವಾಳಗಳನ್ನು ಬಸ್‍ನಲ್ಲಿ ಕೊಂಡೊಯ್ಯುತ್ತಿದ್ದರೆ ಎಂಬುದನ್ನು ಆಧರಿಸಿ ನಾಳೆ ಶಿಕ್ಷೆ ಪ್ರಕಟಿಸುವುದಾಗಿ ತಮಿಳುನಾಡಿನ ಸಲಿಮ್ ನಗರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin