ಫ್ಲೋರಿಡಾಗೆ ಅಪ್ಪಳಿಸಿದ ಇರ್ಮಾ ಚಂಡಮಾರುತ

Live--Hurricane

ಮಿಯಾಮಿ, ಸೆ.10-ಕೆರಿಬಿಯನ್ ದ್ವೀಪದಲ್ಲಿ 30ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ವಿನಾಶಕಾರಿ ಇರ್ಮಾ ಚಂಡಮಾರುತ ಅಮೆರಿಕದ ಫ್ಲೋರಿಡಾ ಮೇಲೆ ಅಪ್ಪಳಿಸಿದೆ. ಮಿಯಾಮಿ ಪ್ರಾಂತ್ಯದಿಂದ ಲಕ್ಷಾಂತರ ಜನರು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳಿರುವುದರಿಂದ ಭಾರೀ ಅನಾಹುತ ತಪ್ಪಿದೆ. ಆದಾಗ್ಯೂ ಸಾವು-ನೋವಿನ ವರದಿಗಳಿವೆ.  ಕೆರಿಬಿಯನ್ ದ್ವೀಪದಿಂದ ಗರಿಷ್ಠ ಸಾಮಥ್ರ್ಯ ಕೆಟಗರಿ-5 ವೇಗದಲ್ಲಿ ಕ್ಯೂಬಾದ ಕ್ಯಾಮಾಗ್ಯುಯೆ ಪ್ರದೇಶದ ಮೇಲೆ ಅಪ್ಪಳಿಸಿದ ಚಂಡಮಾರುತ ಅಲ್ಲಿ ಭಾರೀ ಮಳೆ ಸುರಿಸಿ ಸಾವು-ನೋವು ಉಂಟು ಮಾಡಿತ್ತು.

ಗಂಟೆಗೆ 260 ಕಿಮೀ ವೇಗದಲ್ಲಿ ಚಲಿಸಿದ ಪ್ರಚಂಡ ಮಾರುತ ಕೆಟಗರಿ-4 ಪ್ರಬಲತೆಯೊಂದಿಗೆ ಫ್ಲೋರಿಡಾವನ್ನು ಅಪ್ಪಳಿಸಲಿದೆ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಭಾರತೀಯ ಮೂಲದ ನಿವಾಸಿಗಳೂ ಸೇರಿದಂತೆ ಲಕ್ಷಾಂತರ ಮಂದಿ ತಮ್ಮ ಮನೆಗಳಿಗೆ ಮರಳು ಚೀಲಗಳಿಂದ ರಕ್ಷಣೆ ನೀಡಿ ಸುರಕ್ಷಿತ ಸ್ಥಳಗಳತ್ತ ಪಲಾಯನ ಮಾಡಿದ್ದಾರೆ. ಚಂಡಮಾರುತದ ತೀವ್ರತೆಯೊಂದಿಗೆ ರಕ್ಷಣಾ ಯೋಧರು ಸೆಣಸುತ್ತಿದ್ದು, ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

Facebook Comments

Sri Raghav

Admin