ಬೆಂಗಳೂರಲ್ಲಿ ದಾಖಲೆ ಮಳೆ, ಇಂದು ಮತ್ತೆ ನಾಳೆಯೂ ಅಬ್ಬರಿಸಲಿದ್ದಾನೆ ವರುಣ

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಬೆಂಗಳೂರು, ಸೆ.10-ನಗರದಲ್ಲಿ ನಿನ್ನೆ ದಾಖಲೆಯ ಮಳೆಯಾಗಿದ್ದು ಕೆಂಗೇರಿಯಲ್ಲಿ ಅತಿಹೆಚ್ಚು 167 ಮಿ.ಮೀ ಮಳೆಯಾಗಿದೆ. ಇಂದು, ನಾಳೆಯೂ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲೂ ಭಾರೀ ಮಳೆಯಾಗಿದ್ದು , ಕೊಟ್ಟಿಗೆ ಪಾಳ್ಯ 73 ಮಿ.ಮೀ ಜೆಪಿಪಾರ್ಕ್ 53, ಹೇರೋಹಳ್ಳಿ 80.5, ದೊಡ್ಡಬಿದರೆ ಕಲ್ಲು 91.5, ಜ್ಞಾನಭಾರತಿ 9.5, ಬಸವನಗುಡಿ 76, ಸಾರಕ್ಕಿ 69, ಕುಮಾರಸ್ವಾಮಿ ಲೇಔಟ್ 66.5 , ಅಗ್ರಹಾರ ದಾಸರಹಳ್ಳಿ 70.5, ರಾಜರಾಜೇಶ್ವರಿನಗರ 128, ಎಚ್‍ಎಂಟಿ 93, ಕೊಟ್ಟಿಗೆಹಳ್ಳಿ 67, ಬ್ಯಾಟರಾಯನಪುರ 56.5, ದೊಡ್ಡಬೊಮ್ಮಸಂದ್ರ 90, ಪೀಣ್ಯ 92, ಬಾಗಲಕುಂಟೆ 111.5, ಶೆಟ್ಟಿಹಳ್ಳಿ 96, ಹೆಗ್ಗನಹಳ್ಳಿ 90, ಉತ್ತರಹಳ್ಳಿ 76, ಬೇಗೂರು 86.5 ಕೋಣನಕುಂಟೆ 82.5, ಬಿಳೆಕಳ್ಳಿ 66, ಕೊಟ್ಟಿಗೆರೆ 81, ಅಂಜನಪುರ 106.5, ನಾಗರಬಾವಿ 95, ಕಾಟನ್‍ಪೇಟೆ 63, ರಾಜಾಜಿನಗರ 56, ನಂದಿನಿ ಲೇಔಟ್ 61, ನಾಗಪುರ 80, ತಾವರೆಕೆರೆ 110.5, ಕೆಜಿಹಳ್ಳಿ 114.5, ಹಂಪಿನಗರ 80.5, ವಿದ್ಯಾಪೀಠ 82.5, ಬಿಟಿಎಂ ಲೇಔಟ್ 66, ರಾಧಾಕೃಷ್ಣ ಟೆಂಪಲ್ 69 ಮಿ.ಮೀ ಮಳೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಾಗಡಿ, ಹಾಸನ, ರಾಮನಗರ ಸೇರಿದಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು , ಇಂದು ಮತ್ತು ನಾಳೆಯು ಮಳೆಯಾಗುವ ಸಾಧ್ಯತೆ ಇದೆ. ನಾಳೆಯಿಂದ ಉತ್ತರ ಕರ್ನಾಟಕದಲ್ಲೂ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

 

Facebook Comments

Sri Raghav

Admin