ಭಾರತೀಯ ನೌಕಾಪಡೆ ಮಹಿಳಾ ತಂಡದ ವಿಶ್ವ ಪರ್ಯಟನೆಗೆ ನಿರ್ಮಲಾ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Nirmala-S

ಗೋವಾ,ಸೆ.10- ಭಾರತೀಯ ನೌಕಾ ಪಡೆಯ ಮಹಿಳಾ ತಂಡದ ವಿಶ್ವ ಪ್ರದಕ್ಷಿಣೆ ಅಭಿಯಾನಕ್ಕೆ ಗೋವಾ ರಾಜಧಾನಿ ಪಣಜಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೌಕಾದಳದ ಉನ್ನತಾಧಿಕಾರಿಗಳು ಮತ್ತು ರಕ್ಷಣಾ ಸಚಿವಾಲಯದ ಸಿಬ್ಬಂದಿ ಹಾಜರಿದ್ದರು.
ಪಣಜಿ ಸಮೀಪದ ವೆರೆಮ್‍ನ ಐಎನ್‍ಎಸ್ ಮಾಂಡೋವಿ ದೋನಿ ಕೊಳದಿಂದ ಮಧ್ಯಾಹ್ನ 12.30ಕ್ಕೆ ವಿಶ್ವ ಪ್ರದಕ್ಷಿಣೆ ಆರಂಭವಾಗಿದೆ. ಪುಟ್ಟ ನಾವೆಯೊಂದರ ಮೂಲಕ ಮಹಿಳಾ ತಂಡ ಇದೇ ಪ್ರಪ್ರಥಮ ಬಾರಿಗೆ ಪ್ರಪಂಚ ಪರ್ಯಟನೆ ಕೈಗೊಂಡಿದೆ.

ದೇಶಿ ನಿರ್ಮಿತ ಐಎನ್‍ಎಸ್‍ವಿ ತರಿಣಿ ಹಾಯಿ ದೋಣಿ ಮೂಲಕ ಈ ಸಾಹಸಯಾನ ಆರಂಭವಾಗಿದ್ದು , ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಅನೇಕ ಸಾಗರಗಳು, ಸಮುದ್ರಗಳು ಮತ್ತು ಸರೋವರಗಳನ್ನು ನೌಕಾ ಪಡೆಯ ವೀರ ವನಿತೆಯರು ದಾಟಲಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳ ಬಂದರುಗಳಲ್ಲಿ ಈ ತಂಡ ವಿಶ್ರಾಂತಿ ಪಡೆಯಲಿದೆ.

Facebook Comments

Sri Raghav

Admin