ಮೈಸೂರಲ್ಲಿ ನಾಯಿ ಸಾಕಲು ಇನ್ನು ಮುಂದೆ ಪಾಲಿಕೆ ಅನುಮತಿ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Dog

ಮೈಸೂರು, ಸೆ.10- ಇನ್ನು ಮುಂದೆ ಮೈಸೂರು ನಗರದಲ್ಲಿ ಮನೆಗಳಲ್ಲಿ ನಾಯಿ ಸಾಕುವವರು ಮಹಾನಗರ ಪಾಲಿಕೆಯ ಅನುಮತಿ ಪಡೆಯಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಇತ್ತೀಚೆಗೆ ದಟ್ಟಗಳ್ಳಿ ನಿವಾಸಿ ಅಜಯ್ ಎಂಬುವವರ ರ್ಯಾಟ್‍ವೀಲರ್ ಜಾತಿಯ ಸಾಕುನಾಯಿ ಅವರ ನಾಲ್ಕು ವರ್ಷದ ಮಗ ಅಮೋಘವರ್ಷನ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಈ ಚಿಂತನೆ ನಡೆಸಿದೆ.

ಸಾಮಾನ್ಯವಾಗಿ ರ್ಯಾಟ್‍ವೀಲರ್ ತಳೀಯ ನಾಯಿ ಸ್ವಭಾವತಃ ಕ್ರೂರಿಯಾಗಿದ್ದು, ಇದನ್ನು ಬೇಟೆಗೆ ಉಪಯೋಗಿಸುತ್ತಾರೆ. ಮನೆಯಲ್ಲಿ ಸಾಕಲು ಇದು ಸಾಧುವಲ್ಲ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ನಗರದಲ್ಲಿ ನಾಯಿ ಸಾಕುವವರು ಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ನಾವು ನಾಯಿ ಸಾಕಲು ಅವರ ಮನೆಯಲ್ಲಿ ನಾಯಿಗೆ ಬೇಕಾದ ಮೂಲ ಸೌಲಭ್ಯಗಳು ಇವೆಯೇ, ಸ್ಥಳ ಹೇಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಅನುಮತಿ ನೀಡುತ್ತೇವೆ ಎಂದು ಪಶು ವೈದ್ಯವಿಭಾಗದ ಸಹ ನಿರ್ದೇಶಕ ಡಾ.ಸುರೇಶ್ ತಿಳಿಸಿದ್ದಾರೆ.

Facebook Comments

Sri Raghav

Admin