ಮೋದಿ ಚಿತ್ರ ಬಿಡಿಸಿದ ಮುಸ್ಲಿಂ ಮಹಿಳೆಗೆ ಆಕೆಯ ಪತಿ ಮತ್ತು ಐವರಿಂದ ಥಳಿತ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಬಲಿಯಾ (ಉ.ಪ್ರ.), ಸೆ.9-ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವರ್ಣಚಿತ್ರಗಳನ್ನು ರಚಿಸಿದ ನವ ವಿವಾಹಿತೆ ಮುಸ್ಲಿಂ ಮಹಿಳೆ ಮೇಲೆ ಆಕೆಯ ಪತಿ ಮತ್ತು ಐವರು ಥಳಿಸಿ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿರುವ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯ ಸಿಕಂದರ್‍ಪುರ್‍ನಲ್ಲಿ ನಡೆದಿದೆ.  ಈ ಸಂಬಂಧ ನಗ್ಮಾ ಪರ್ವೀನ್ ಎಂಬ ಮಹಿಳೆಯ ತಂದೆ ಈ ಆರು ಮಂದಿ ವಿರುದ್ಧ ಸಿಕಂದರ್‍ಪುರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋದಿ ಮತ್ತು ಯೋಗಿ ಚಿತ್ರ ಬರೆದು ನನ್ನ ಮಗಳನ್ನು ಅಳಿಯ ಪರ್ವೇಜ್ ಮತ್ತು ಇತರ ಐವರು ಥಳಿಸಿ ಮನೆಯೊಂದ ಹೊರ ಹಾಕಿದ್ದಾರೆ ಎಂದು ನಗ್ಮಾ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Facebook Comments

Sri Raghav

Admin