ಶಾಲೆಗೆ ಹೋಗಲು ಮಕ್ಕಳು 3 ಕಿ.ಮೀ. ನಡೆಯಬೇಕೇ..? ಸುಪ್ರೀಂ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Sureme-School--01

ನವದೆಹಲಿ, ಸೆ.10-ಮಕ್ಕಳು ಶಾಲೆಗೆ ಹಾಜರಾಗಲು ಮೂರು ಅಥವಾ ಅದಕ್ಕಿಂತ ಹೆಚ್ಚು ಕಿಲೋಮೀಟರ್‍ಗಳಷ್ಟು ದೂರ ನಡೆಯುವುದನ್ನು ತಾನು ನಿರೀಕ್ಷಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಶಿಕ್ಷಣ ಹಕ್ಕು ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಬೇಕಾದರೆ ಇಂಥ ಸಮಸ್ಯೆಗಳು ಇತ್ಯರ್ಥವಾಗಬೇಕು ಎಂದೂ ಸರ್ವೋಚ್ಚ ನ್ಯಾಯಾಲಯ ಪ್ರತಿಪಾದಿಸಿದೆ.  ಸಾಕ್ಷರತೆ ಪ್ರಮಾಣ ಹೆಚ್ಚಾಗಿರುವ ಕೇರಳದ ಪರಪ್ಪನನ್‍ಗಡಿ ಪಟ್ಟಣದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತೇರ್ಗಡೆಯಾದ ನಾಲ್ಕನೆ ತರಗತಿ ಮಕ್ಕಳು ಮಾಧ್ಯಮಿಕ ಶಾಲೆಗೆ ಹೋಗಲು ಪ್ರತಿದಿನ 3-4 ಕಿ.ಮೀ ದೂರ ನಡೆಯಬೇಕಾಗಿದೆ ಎಂಬ ಸಂಗತಿ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶಾಲೆಗೆ ಹಾಜರಾಗುವುದಕ್ಕಾಗಿಯೇ ಪ್ರತಿದಿನ ಮಕ್ಕಳು ಮೂರು ಅಥವಾ ಅದಕ್ಕಿಂತ ಹೆಚ್ಚು ಕಿಲೋಮೀಟರ್ ದೂರ ನಡೆಯುತ್ತಾರೆ ಎಂಬುದನ್ನು ನಿರೀಕ್ಷಿಸಲಾಗದು. ಯಾವ ಮಕ್ಕಳೂ ಇಷ್ಟು ದೂರು ನಡೆದು ಹೋಗುವುದನ್ನು ತಪ್ಪಿಸಲು ಶಾಲೆಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಸರ್ಕಾರವು ಸಹ ಸಹಕಾರ ನೀಡಬೇಕು ಆಗ ಮಾತ್ರ ಸಂವಿಧಾನದ ಶಿಕ್ಷಣದ ಹಕ್ಕು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ಬರಲು ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ನೇತೃತ್ವದ ಪೀಠ ಸೂಚಿಸಿದೆ.

Facebook Comments

Sri Raghav

Admin