ಶ್ವಾನವನ್ನೂ ಬಿಡದ ಕಾಮುಕ..!

ಈ ಸುದ್ದಿಯನ್ನು ಶೇರ್ ಮಾಡಿ

Dog--01

ಮುಂಬೈ, ಸೆ.10-ವಿಕೃತ ಕಾಮಕ್ಕೆ ಮಾನವನಿಗೆ ಸರಿಸಾಟಿ ಜೀವಿ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಶ್ವಾನಕ್ಕೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಸತಿ ಸಂಕೀರ್ಣದ ಭದ್ರತಾ ಸಿಬ್ಬಂದಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮ್ ನರೇಶ್ ಮಿಶ್ರಾ ಬಂಧಿತ ವಿಕೃತ ಕಾಮಿ, ಈತ ಕಳೆದ ವಾರ ಮೂರು ಬಾರಿ ನಾಯಿ ಮೇಲೆ ಲೈಂಗಿಕ ಹಲ್ಲೆ ಮಾಡಿದ್ದಾನೆ.

ವಸತಿ ಸಂಕೀರ್ಣದ ಸಿಸಿಟಿವಿ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ಧಾರೆ. ಈತ ಮೂರು ಬಾರಿಯೂ ನಾಯಿಯೊಂದನ್ನು ಶೌಚಾಲಯಕ್ಕೆ ಎಳೆದೊಯ್ದು ಬಾಗಿಲು ಭದ್ರಪಡಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಈತ ಅಷ್ಟೂ ಸಲವೂ ಶ್ವಾನದೊಂದಿಗೆ ಆರೇಳು ನಿಮಿಷ ಕಳೆದಿದ್ದಾನೆ. ನಿಸರ್ಗಕ್ಕೆ ವಿರುದ್ಧವಾದ ಲೈಂಗಿಕ ಕೃತ್ಯ ಆರೋಪದ ಮೇಲೆ ಈಗ ಮಿಶ್ರಾ ಪೊಲೀಸರ ಅತಿಥಿಯಾಗಿದ್ದಾನೆ.

Facebook Comments

Sri Raghav

Admin