ಹಳಿ ತಪ್ಪಿದ ಸಿಲ್‍ದಾ ಎಕ್ಸ್ ಪ್ರೆಸ್ : 16 ದಿನಗಳಲ್ಲಿ 7ನೇ ಪ್ರಕರಣ

ಈ ಸುದ್ದಿಯನ್ನು ಶೇರ್ ಮಾಡಿ

Train--01

ಜಮ್ಮು, ಸೆ.10-ಉತ್ತರ ಪ್ರದೇಶದಲ್ಲಿ ರೈಲುಗಳು ಹಳಿ ತಪ್ಪುತ್ತಿರುವ ಸರಣಿ ಪ್ರಕರಣಗಳ ನಂತರ ಕಣಿವೆ ರಾಜ್ಯ ಕಾಶ್ಮೀರದಲ್ಲೂ ಅದೇ ರೀತಿ ಘಟನೆ ವರದಿಯಾಗಿದೆ. ಜಮ್ಮು ರೈಲ್ವೆ ನಿಲ್ದಾಣದ ಬಳಿ ನಿನ್ನೆ ಸಂಜೆ ಸಿಲ್‍ದಾ ಎಕ್ಸ್‍ಪ್ರೆಸ್‍ನ ಬೋಗಿಯೊಂದು ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಕಳೆದ 16 ದಿನಗಳಲ್ಲಿ ರೈಲು ಹಳಿ ತಪ್ಪಿದ ಘಟನೆಗಳ ಸಂಖ್ಯೆ ಇದರಿಂದ ಏಳಕ್ಕೇರಿದೆ.
ಸ್ವಚ್ಚಗೊಳಿಸುವ ಸ್ಥಳದಿಂದ ಎಕ್ಸ್‍ಪ್ರೆಸ್‍ನ ಖಾಲಿ ಬೋಗಿಯ ಪ್ಲಾಟ್‍ಫಾರಂಗೆ ತರುತ್ತಿದ್ದಾಗ ಅದು ಹಳಿತಪ್ಪಿದು. ಕೋಚ್ ಖಾಲಿ ಇದ್ದ ಕಾರಣ ಅನಾಹುತ ಸಂಭವಿಸಲಿಲ್ಲ. ಈ ಘಟನೆಯಿಂದಾಗಿ ಸಿಲ್‍ದಾ ಎಕ್ಸ್‍ಪ್ರೆಸ್ ರೈಲು ಪ್ರಯಾಣ ಕೆಲಕಾಲ ವಿಳಂಬವಾಗಿತ್ತು. ಕಳೆದ ಮಂಗಳವಾರ ಮಹಾರಾಷ್ಟ್ರದ ಖಾನ್‍ದಾಲಾದಲ್ಲಿ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿಯಿಂದ ಜಾರಿದ್ದವು. ಇದಕ್ಕೂ ಕೆಲವು ಗಂಟೆಗಳ ಹಿಂದೆ ದೆಹಲಿ ಮತ್ತು ಉತ್ತರಪ್ರದೇಶದ ಸೋನಭದ್ರದಲ್ಲಿ ರೈಲುಗಳ ಕೋಚ್‍ಗಳು ಉರುಳಿ ಬಿದ್ದಿದ್ದವು.

ಸೆಪ್ಟೆಂಬರ್ 2ರಂದು ಒಡಿಶಾದ ಕಟಕ್ ನಗರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿತ್ತು. ಅದೇ ದಿನ ಉತ್ತರಪ್ರದೇಶದ ಹದತ್‍ಪುರ್ ರೈಲ್ವೆ ನಿಲ್ದಾಣದ ಬಳಿ ಮತ್ತೊಂದು ಸರಕುಸಾಗಣೆ ರೈಲಿನ ನಾಲ್ಕು ವ್ಯಾಗನ್‍ಗಳು ಟ್ರ್ಯಾಕ್‍ನಿಂದ ದೂರ ಸರಿದು ಉರುಳಿದ್ದವು. ಆಗಸ್ಟ್ 25ರಂದು ಮುಂಬೈನ ಹಾರ್ಬರ್ ಲೈನ್‍ನ ಮಹಿಮ್ ನಿಲ್ದಾಣದ ಬಳಿ ಸ್ಥಳೀಯ ರೈಲು ಹಳಿ ತಪ್ಪಿ ಐವರು ಗಾಯಗೊಂಡಿದ್ದರು.

Facebook Comments

Sri Raghav

Admin