ಮುಂಬೈನಲ್ಲಿ 12ನೇ ಮಹಡಿಯಿಂದ ಹಾರಿ ಬೆಂಗಳೂರಿನ ಪಿಯಾನೋ ವಾದಕ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Karan--01

ಮುಂಬೈ, ಸೆ.10-ಬೆಂಗಳೂರಿನ ಪಿಯಾನೋ ವಾದಕನೊಬ್ಬ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಘಟನೆ ನಡೆದಾಗ ಎಸ್ಟೋನಿಯಾ ಪ್ರಜೆ ಸೇರಿದಂತೆ ಇಬ್ಬರು ಸ್ನೇಹಿತರು ಅಲ್ಲೇ ಇದ್ದರು. ಕರಣ್ ಜೋಸೆಫ್ ಸಾವಿಗೆ ಶರಣಾದ ಪ್ರತಿಭಾವಂತ ಪಿಯಾನೋ ವಾದಕ. ಈತ ತಂದೆ ಮತ್ತು ಬಂಧು-ಮಿತ್ರರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಕರಣ್ ತನ್ನ ಸ್ನೇಹಿತ ರಿಷಿ ಶಾಗೆ ಸೇರಿದ ಬ್ಯಾಂಡ್‍ಸ್ಟಾಂಡ್ ಅಪಾರ್ಟ್‍ಮೆಂಟ್‍ಗೆ ಸ್ಥಳಾಂತರಗೊಂಡಿದ್ದ.

ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದೆ. ತನ್ನ ಸ್ನೇಹಿತರಾದ ರಿಷಿ ಮತ್ತು ಎಸ್ಟೋನಿಯಾದ ಸುಝಾನ ಉಸ್ಮಾ ಅವರೊಂದಿಗೆ ಹಣ್ಣಿನರಸ ಸೇವಿಸುತ್ತಿದ್ದ ಕರಣ್ ಹಠಾತ್ತನೆ ಎದ್ದು ಬಾಲ್ಕನಿಯಿಂದ ಹೊರಬಂದು 12ನೇ ಮಹಡಿಯಿಂದ ಕೆಳಗೆ ಜಿಗಿದು ಪ್ರಾಣ ಬಿಟ್ಟ. ಸಂಗೀತಗಾರನಾಗಿದ್ದ ರಿಷಿಯೊಂದಿಗೆ ಹೊಸ ಸಂಗೀತ ಪರಿಕಲ್ಪನೆಯ ಯೋಜನೆಯೊಂದಲ್ಲಿ ಕರಣ್ ಕಾರ್ಯನಿರ್ವಹಿಸುತ್ತಿದ್ದ. ಈತನ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin