16 ಗಂಟೆಯ ನಂತರ ಗರ್ಭಿಣಿಯ ದೇಹದಲ್ಲಿದ್ದ ಸೂಜಿ ಹೊರಕ್ಕೆ..!

Pregnet--Women

ಭೂಪಾಲ್, ಸೆ. 10- ವೈದ್ಯರ ನಿರ್ಲಕ್ಷ್ಯತನದಿಂದಾಗಿ ಗರ್ಭಿಣಿಯ ದೇಹದಲ್ಲಿದ್ದ ಸೂಜಿಯನ್ನು 16 ಗಂಟೆಗಳ ನಂತರ ಹೊರ ತೆಗೆಯಲಾಗಿದೆ. ಭೂಪಾಲ್‍ನ ಸುಲ್ತಾನಿಯಾ ಜನಾನಾ ಆಸ್ಪತ್ರೆಯಲ್ಲಿ ಈ ನಿರ್ಲಕ್ಷ್ಯ ಘಟನೆ ನಡೆದಿದೆ. ನಿನ್ನೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 23 ವರ್ಷದ ರಾಕಿ ಗಾನೋಟಾ ಅವರು ಆಸ್ಪತ್ರೆಗೆ ಬಂದಿದ್ದಾಗ ನೋವು ನಿವಾರಕ ಇಂಜೆಕ್ಷನ್ ಕೊಡುವ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಸೂಜಿಯನ್ನು ದೇಹದೊಳಗೆ ಬಿಟ್ಟಿರುವ ಘಟನೆ ಸಂಭವಿಸಿದೆ.
ರಾಕಿ ಗಾನೋಟಾಗೆ ಸ್ವಲ್ಪ ಸಮಯದ ನಂತರ ಬೆನ್ನು ನೋವು ಕಾಣಿಸಿಕೊಂಡಾಗ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಮುಂದಾಗ ಆಕೆಯ ಸ್ಪೆನಲ್‍ಕಾರ್ಡ್‍ನಲ್ಲಿ ಸೂಜಿ ಇರುವುದು ಪತ್ತೆಯಾಗಿದ್ದು ಚಿಕಿತ್ಸೆ ನಡೆಸುವ ಮೂಲಕ ಸೂಜಿಯನ್ನು ಹೊರ ತೆಗೆಯಲಾಗಿದೆ. ವೈದ್ಯರ ನಿರ್ಲಕ್ಷ್ಯತೆ ಯಿಂದಲೇ ಈ ರೀತಿಯ ಘಟನೆ ನಡೆದಿದ್ದು ಸಂಬಂಧಪಟ್ಟ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆಯ ಮುಖ್ಯ ವೈದ್ಯ ಕರಣ್ ಪಿಪ್ರೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin