ಇರ್ಮಾ ಚಂಡಮಾರುತಕ್ಕೆ ಸಮುದ್ರವೇ ನಾಪತ್ತೆ..! ಹೀಗೇಕಾಗುತ್ತೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

iRMA--01

ಮಿಯಾಮಿ, ಸೆ.11- ಅಮೆರಿಕದ ಫ್ಲೋರಿಡಾ ಮೇಲೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತದ ರೌದ್ರಾವತಾರಕ್ಕೆ ಸಮುದ್ರವೇ ಕಣ್ಮರೆಯಾಗಿವೆ ಎಂದರೆ ನೀವು ನಂಬುತ್ತೀರಾ ? ನಂಬಲೇಬೇಕು. ಈ ಕುತೂಹಲಕಾರಿ ಸಂಗತಿ ಹಿಂದೆ ವೈಜ್ಞಾನಿಕ ಕಾರಣವೂ ಇದೆ.  ಇರ್ಮಾ ಚಂಡಮಾರುತ ಫ್ಲೋರಿಡಾ ಮೇಲೆ ರಭಸವಾಗಿ ಅಪ್ಪಳಿಸುವುದಕ್ಕೆ ಮುನ್ನ ಲಕ್ಷಾಂತರ ಮಂದಿ ಸುರಕ್ಷಿತ ಪ್ರದೇಶಗಳಿಗೆ ಪಲಾಯನವಾದರು. ಅದೇ ರೀತಿ ಚಂಡಮಾರುತ ಭೀತಿ ಎಂಬಂತೆ ಫ್ಲೋರಿಡಾ ಮತ್ತು ಬಹಮಾಸ್ ಪ್ರದೇಶದ ಕಡಲು ನಾಪತ್ತೆಯಾಗಿದೆ ! ಅತ್ಯಂತ ಜನಪ್ರಿಯ ಕಡಲ ತೀರಗಳು ಈಗ ಖಾಲಿ ಖಾಲಿ. ಸಾಗರದ ನೀರು ಬಹು ಹಿಂದಕ್ಕೆ ಸರಿದಿದೆ. ಭೂಮಿಯೇ ನೀರನ್ನು ಆಪೋಶನ ತೆಗೆದುಕೊಂಡಂತೆ ಆ ಪ್ರದೇಶದ ಸಮುದ್ರ ತಟ ದೊಡ್ಡ ಮೈದಾನದಂತಾಗಿದೆ (ತಾಂಪ ಬೀಚ್‍ನ ಚಿತ್ರವನ್ನು ಗಮನಿಸಿ).

DJPrlqhUEAAWPxZ

ಕಾರಣವೇನು?:

ಈ ವಿದ್ಯಮಾನವನ್ನು ಚಂಡಮಾರುತದ ಹಿಮ್ಮುಖ ಏರಿಳಿತ (ರಿವರ್ಸ್ ಸ್ಟಾರ್ಮ್ ಸರ್ಜ್) ಎನ್ನುತ್ತಾರೆ. ಚಂಡಮಾರುತದ ವೇಳೆ ರಭಸವಾಗಿ ಬೀಸುವ ಗಾಳಿಯು ಸಮುದ್ರವನ್ನು ಹಿಂದಕ್ಕೆ ತಳ್ಳುತ್ತದೆ. ಚಂಡಮಾರುತದ ರಭಸವನ್ನು ಪ್ರತಿರೋಧಿಸುವ ಸಾಮಥ್ರ್ಯ ಆ ಸಮಯದಲ್ಲಿ ಸಾಗರದ ಅಲೆಗಳಿಗೂ ಇರುವುದಿಲ್ಲ. ಹೀಗಾಗಿ ಜಲರಾಶಿಯು ತುಯ್ದಾಡುತ್ತಾ ಚಂಡಮಾರುತ ಅಪ್ಪಳಿಸುತ್ತಿದ್ದಂತೆ ಅದೇ ಮಾರ್ಗವಾಗಿ ಹಿಮ್ಮುಖವಾಗಿ ಚಲಿಸುತ್ತದೆ, ತತ್ಪರಿಣಾಮವಾಗಿ, ಅಲ್ಲಿ ಸಮುದ್ರ ಇತ್ತು ಎಂದು ನಂಬಲಾರದಂತೆ ಖಾಲಿಯಾಗುತ್ತದೆ. ಭೂಮಿಯೇ ನೀರನ್ನು ತನ್ನ ಗರ್ಭಕ್ಕೆ ಎಳೆದುಕೊಂಡಂತೆ ಕಂಡುಬರುತ್ತದೆ ಎನ್ನುತ್ತಾರೆ ಮಿಯಾಮಿಯ ರಾಷ್ಟ್ರೀಯ ಹವಾಮಾನ ಸೇವಾ ವಾತಾವರಣ ತಜ್ಞ ರಯಾನ್ ರೋಜರ್ಸ್ .

hero_wide_640

ಸಾಗರ ತೀರ ಪ್ರದೇಶಗಳಲ್ಲಿ ಮರಳು ಮೇಲ್ಮೈ ಇರುವ ಕಾರಣ ಚಂಡಮಾರುತಕ್ಕೆ ಸಮುದ್ರವನ್ನು ಹಿಮ್ಮೆಟ್ಟಿಸುವುದು ಸುಲಭ. ಚಂಡಮಾರುತದ ರಭಸಕ್ಕೆ ಸಮುದ್ರವೇ ಹೆದರಿದಂತೆ ಹಿಂದಕ್ಕೆ ಸಾಗುತ್ತದೆ. ಆಗ ಸಮುದ್ರ ಖಾಲಿಯಾದಂತೆ ಅಥವಾ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾದಂತೆ ಗೋಚರಿಸುತ್ತದೆ. ಇದೊಂದು ಸ್ವಾಭಾವಿಕ ವೈಜ್ಞಾನಿಕ ವಿದ್ಯಮಾನ. ಈ ಘಟನೆಗಳು ಈ ಹಿಂದೆ ಸ್ಯಾಂಡಿ ಮತ್ತು ಕತ್ರಿನಾ ಚಂಡಮಾರುತಗಳು ಅಪ್ಪಳಿಸಿದಾಗಲೂ ಕಂಡುಬಂದಿತ್ತು ಎಂದು ರೋಜರ್ಸ್ ವಿವರಿಸಿದ್ದಾರೆ.

images

ಸಾಗರ ಗರ್ಭದಲ್ಲಿ ಭಾರಿ ಭೂಕಂಪ ಸಂಭವಿಸಿದಾಗ ಸಮುದ್ರದ ನೀರನ್ನು ಅದು ಸೆಳೆದುಕೊಳ್ಳುತ್ತದೆ. ಹೀಗಾಗಿ ಜಲರಾಶಿ ಹಿಂದಕ್ಕೆ ಚಲಿಸುತ್ತದೆ. ಸ್ವಲ್ಪ ಸಮಯದ ನಂತರ ಪ್ರಚಂಡ ವೇಗದಲ್ಲಿ ನೀರು ಸಮುದ್ರ ತೀರಗಳಿಗೆ ಅಪ್ಪಳಿಸುತ್ತದೆ ಎಂಬ ಉದಾಹರಣೆಯನ್ನು ಅವರು ನೀಡಿದ್ದಾರೆ.

Facebook Comments

Sri Raghav

Admin