ಕರಾಚಿಯಲ್ಲಿ 53 ಉಗ್ರರನ್ನು ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Karachi--01

ಕರಾಚಿ, ಸೆ.11-ಭಯೋತ್ಪಾದಕರ ಸ್ವರ್ಗ ಎಂಬ ಹಣೆಪಟ್ಟಿಯೊಂದಿಗೆ ವಿಶ್ವದ ಬಹುತೇಕ ಎಲ್ಲ ದೇಶಗಳಿಂದ ಖಂಡನೆಗೆ ಒಳಗಾಗಿರುವ ಪಾಕಿಸ್ತಾನ ಉಗ್ರರ ವಿರುದ್ಧ ಬಿರುಸಿನ ಕಾರ್ಯಾಚರಣೆ ಕೈಗೊಂಡಿದೆ. 24 ತಾಸುಗಳ ಅವಧಿಯಲ್ಲಿ ಬಂದರು ನಗರಿ ಕರಾಚಿಯ ವಿವಿಧೆಡೆ ಕ್ಷಿಪ್ರ ದಾಳಿಗಳನ್ನು ಕೈಗೊಂಡ ಪೊಲೀಸರು 53 ಉಗ್ರರನ್ನು ಬಂಧಿಸಿದ್ದಾರೆ ಈ ಕಾರ್ಯಾಚರಣೆ ವೇಳೆ ಭಯೋತ್ಪಾದಕನೊಬ್ಬ ಹತನಾಗಿದ್ದಾನೆ.  ಕರಾಚಿಯ ನಾನಾ ಪ್ರದೇಶಗಳಲ್ಲಿ ವಿವಿಧ ಗುಂಪುಗಳಿಗೆ ಸೇರಿದ ಉಗ್ರರು ಮತ್ತು ಕ್ರಿಮಿನಲ್‍ಗಳು ಇದ್ದಾರೆಂಬ ಖಚಿತ ಮಾಹಿತಿ ನಂತರ ಏಕಕಾಲದಲ್ಲಿ ಈ ದಾಳಿಗಳು ನಡೆದಿವೆ. ಒಟ್ಟು 53 ಜನರನ್ನು ಬಂಧಿಸಲಾಗಿದೆ ಎಂದು ಕರಾಚಿ ಪೊಲೀಸ್ ವರಿಷ್ಠಾಧಿಕಾರಿ ಅದಿಲ್ ಚಾಂಡಿಯೋ ಹೇಳಿದ್ದಾರೆ.

Facebook Comments

Sri Raghav

Admin