ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ 5-ಸಿ ಸೂತ್ರಕ್ಕೆ ಸಿಂಗ್ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

Rajanath-Singh

ಶ್ರೀನಗರ,ಸೆ.11- ಕಣಿವೆ ರಾಜ್ಯ ಕಾಶ್ಮೀರದಲ್ಲಿ ತಲೆದೋರಿರುವ ಗಂಭೀರ ಸಮಸ್ಯೆಗಳ ಇತ್ಯರ್ಥ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 5-ಸಿ ಸೂತ್ರವೊಂದರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.  ಕಂಪ್ಯಾಷನ್(ಸಹಾನುಭೂತಿ), ಕಮ್ಯುನಿಕೇಷನ್(ಸಂವಹನ), ಕೊ-ಎಕ್ಸಿಸ್ಟೆಂನ್ಸ್ ( ಸಹಬಾಳ್ವೆ), ಕಾನ್ಫಡೆನ್ಸ್ ಬಿಲ್ಡಿಂಗ್(ವಿಶ್ವಾಸ ವೃದ್ದಿ) ಹಾಗೂ ಕನ್‍ಸಿಸ್ಟೆನ್ಸಿ( ಸ್ಥಿರತೆ) ಈ ಐದು ಸಿಗಳ ಸೂತ್ರದ ತಳಹದಿಯ ಮೇಲೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಸಿಂಗ್ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಕಾಶ್ಮೀರದಲ್ಲಿ ಹಿಂಸಾಚಾರ ಗಣನೀಯವಾಗಿ ಇಳಿಮುಖವಾಗಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಗೊಳ್ಳುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

Facebook Comments

Sri Raghav

Admin