ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಸುದ್ದಿ ಸತ್ಯಕ್ಕೆ ದೂರವಾದದ್ದು : ಸಾಲುಮರದ ತಿಮ್ಮಕ್ಕ

ಈ ಸುದ್ದಿಯನ್ನು ಶೇರ್ ಮಾಡಿ

Salumarad-ATimmakka

ಬೆಂಗಳೂರು,ಸೆ.11- ನನ್ನ ಜೀವನ ನಿರ್ವಹಣೆಗಾಗಿ ಸರ್ಕಾರ ನೀಡಿರುವ 10 ಲಕ್ಷ ರೂ.ಗಳನ್ನು ನಿರಾಕರಿಸಿ ಒಂದು ಕೋಟಿ ರೂ.ಗಳಿಗೆ ಬೇಡಿಕೆ ಇಡಲಾಗಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸತ್ಯಕ್ಕೆ ದೂರ ಎಂದು ನಾಡೋಜ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.
ನನ್ನ ದತ್ತು ಪುತ್ರ ಡಾ.ಉಮೇಶ್ ಆಗಲಿ ನಾನಾಗಲಿ ಸರ್ಕಾರ ನೀಡಿದ್ದ ಹಣವನ್ನು ತಿರಸ್ಕರಿಯೂ ಇಲ್ಲ, ಒಂದು ಕೋಟಿ ರೂ.ಗೆ ಬೇಡಿಕೆಯನ್ನು ಇಟ್ಟಿಲ್ಲ. ಉಮೇಶ್‍ನಿಂದಾಗಿ ನನ್ನ ಜೀವನ ಸುಗಮವಾಗಿ ಸಾಗಿದೆ. ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಈ ರೀತಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವುದು ನಮಗೆ ತುಂಬಾ ಬೇಸರ ಉಂಟು ಮಾಡಿದೆ ಎಂದು ತಿಮ್ಮಕ್ಕ ಮತ್ತು ದತ್ತು ಪುತ್ರ ಉಮೇಶ್ ಅವರು ಪ್ರಕಟಣೆಯಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

ಸರ್ಕಾರ ಹಾಗೂ ಕರ್ನಾಟಕದ ಜನ ನಾನು ಮತ್ತು ನನ್ನ ಮಗ ಇಬ್ಬರನ್ನು ಅಕ್ಕರೆಯಿಂದ ನೋಡುತ್ತಿದ್ದು, ನಾವು ಸರ್ಕಾರಕ್ಕೆ ಯಾವುದೇ ರೀತಿ ಬೇಡಿಕೆ ಇಟ್ಟಿಲ್ಲ. ಈ ರೀತಿ ವದಂತಿ ಹರಡುವುದು ನಮ್ಮಿಬ್ಬರಿಗೂ ಮಾಡಿದ ಅವಮಾನ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin