ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗೆ ಈ ಕ್ರೂರಿ ಶಿಕ್ಷಕ ಕೊಟ್ಟ ಶಿಕ್ಷೆ ಏನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Girl--01

ಹೈದ್ರಾಬಾದ್, ಸೆ. 11- ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕರೇ ಇಂದು ವಿದ್ಯಾರ್ಥಿಗಳ ಪಾಲಿಗೆ ನಿಜವಾದ ಕ್ರೂರಿಗಳಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಇಂತಹ ಕ್ರೂರ ಪ್ರಕರಣಗಳು ಮುತ್ತಿನನಗರಿ ಹೈದ್ರಾಬಾದ್‍ನಲ್ಲಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿರುವುದು ಶೋಚನೀಯ.
ಇತ್ತೀಚೆಗೆ ಗಲಾಟೆ ಮಾಡುತ್ತಿದ್ದ ಮಗುವಿನ ತಲೆಯನ್ನು ಬಾಗಿಲಿಗೆ ಸಿಲುಕಿಸಿ 2 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದ ಪ್ರಕರಣ, ತಪ್ಪಾಚಾಬೂಟ್ರಾದ ಶಾಲೆಯೊಂದರಲ್ಲಿ 2ನೆ ತರಗತಿಯ ವಿದ್ಯಾರ್ಥಿಯೊಬ್ಬ ಬೋರ್ಡ್ ಮೇಲೆ ಬರೆದಿದ್ದ ಅಕ್ಷರಗಳನ್ನು ಗುರುತಿಸುವಲ್ಲಿ ವಿಫಲನಾದ್ದರಿಂದ ಮುಖ್ಯ ಶಿಕ್ಷಕ ಬಾಸುಂಡೆ ಬರುವ ಹಾಗೆ ಬಾರಿಸಿ ತನ್ನ ಕ್ರೌರ್ಯ ಮೆರೆದಿದ್ದ.

ಈ ಪ್ರಕರಣಗಳು ಮಾಸುವ ಮುನ್ನವೇ ಶಾಲಾ ವಿದ್ಯಾರ್ಥಿಯೊಬ್ಬಳು ಸಮವಸ್ತ್ರ ಧರಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಬಾಲಕರ ಶೌಚಾಲಯದ ಮುಂದೆ ನಿಲ್ಲಿಸಿ ವಿಕೃತ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ವಿವರ:

ಇತ್ತೀಚೆಗೆ ಖಾಸಗಿ ಶಾಲೆಯೊಂದರಲ್ಲಿ 4ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳನ್ನು ತಡೆದ ದೈಹಿಕ ಶಿಕ್ಷಕನೊಬ್ಬನು ಸಮವಸ್ತ್ರವನ್ನು ಏಕೆ ಧರಿಸಿಲ್ಲ ಎಂದು ಕೇಳಿದ್ದಾನೆ. ನನ್ನಲ್ಲಿ ಇರುವುದು ಒಂದೇ ಸಮವಸ್ತ್ರ ಅದನ್ನು ನನ್ನ ಅಮ್ಮ ಒಗೆದು ಹಾಕಿದ್ದರೆ ಮತ್ತು ಇದರ ಬಗ್ಗೆ ಪತ್ರವನ್ನು ಬರೆದುಕೊಟ್ಟಿದ್ದಾರೆ ಎಂದು ಹೇಳಿದರೂ ಕೂಡ ದೈಹಿಕ ಶಿಕ್ಷಕ ಆಕೆಯನ್ನು ಬಾಲಕರ ಶೌಚಾಲಯಕ್ಕೆ ತಳ್ಳಿ ನಾನು ಹೇಳುವವರೆಗೂ ಇಲ್ಲಿ ನಿಲ್ಲುವಂತೆ ಹೇಳಿ ಹೊರಟು ಹೋಗಿದ್ದಾನೆ.

ಘಂಟೆಗಳ ನಂತರ ಹಿಂದಿರುಗಿದ ದೈಹಿಕ ಶಿಕ್ಷಕ ಮತ್ತೊಮ್ಮೆ ಈ ರೀತಿಯ ತಪ್ಪನ್ನು ಮಾಡಬೇಡ ಎಂದು ಎಚ್ಚರಿಸಿದ್ದಾನೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತನ್ನಿ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿವೆ ಆದರೆ ಇಂತಹ ಕ್ರೂರ ಶಿಕ್ಷಕನ ವರ್ತನೆಯಿಂದ ಮಗು ಶಾಲೆ ಹೋಗಲು ನಿರಾಕರಿಸುತ್ತಿರುವುದು ಈ ನಾಡಿನ ದೌರ್ಭಾಗ್ಯವೇ ಸರಿ.

Facebook Comments

Sri Raghav

Admin